ಜಾನಪದದಲ್ಲಿ ಮಳೆ ಮತ್ತು ಬರ

Author : ಲಕ್ಷ್ಮಣ್ ತೆಲಗಾವಿ



Published by: ಅವಧಿ
Phone: 9480227430

Synopsys

ಲೇಖಕ ಪ್ರೊ.ಲಕ್ಷ್ಮಣ್ ತೆಲಗಾವಿ ಅವರ ಕೃತಿ ʻಜಾನಪದದಲ್ಲಿ ಮಳೆ ಮತ್ತು ಬರ-ಒಂದು ನೋಟʼ. ಪುಸ್ತಕದಲ್ಲಿ ಸಾಹಿತ್ಯಿಕ, ಜಾನಪದೀಯ, ಆರ್ಥಿಕ ಹಾಗೂ ಸಾಮಾಜಿಕ ದೃಷ್ಟಿಕೋನಗಳಿಂದ ಮಳೆ, ಕೃಷಿ ಮತ್ತು ಬರಗಾಲ ಕುರಿತ ವಿಸ್ತೃತ ಒಳನೋಟಗಳಿವೆ. ಹದಿನೈದು ಅಧ್ಯಾಯಗಳ ಜೊತೆಗೆ ಒಂಬತ್ತು ಅನುಬಂಧಗಳನ್ನು ಹೊಂದಿರುವ ಈ ಕೃತಿ ಗ್ರಾಂಥಿಕ ಹಾಗೂ ಮೌಖಿಕ ಆಧಾರಗಳೆರಡನ್ನೂ ಸೊಗಸಾಗಿ ಬಳಸಿಕೊಂಡು ರಚಿತವಾಗಿದೆ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಆಚಾರ್ಯ ಕೃತಿಯಾಗಿ ರೂಪುಗೊಂಡಿದೆ. ಮಳೆ ಸಂಬಂಧಿ ಸಂಪ್ರದಾಯಗಳು, ಆಚರಣೆಗಳು, ಮಳೆಶಕುನಗಳು, ಪರ್ಜನ್ಯಸಂಬಂಧಿ ಶಿಷ್ಟವಿಧಿಗಳು, ಆ ಪರಿಕಲ್ಪನೆ ಬೆಳೆದುಬಂದ ಬಗೆ, ಮಳೆ ಕರೆಯುವ ಶಕ್ತಿ ಇದ್ದವರೆಂದು ಹೇಳಲಾಗುವ ಕೆಲವು ಪವಾಡಪುರುಷರು ಮಾಡಿದ ಪವಾಡಗಳ ದಾಖಲೆಗಳು, ಮಳೆಗಾಗಿ ನಡೆಸಿದ ಮೋಡಬಿತ್ತನೆಯಂಥಾ ವೈಜ್ಞಾನಿಕ ಕಾರ್ಯಕ್ರಮಗಳು ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಸಾಹಿತ್ಯಿಕ ದಾಖಲೆಗಳನ್ನೂ ಜೋಡಿಸಿದ್ದಾರೆ. ಪ್ರೊ.ತೆಲಗಾವಿಯವರು ಜೀವಮಾನ ಪೂರ್ತಿ ತಲಸ್ಪರ್ಶಿ ಸಂಶೋಧನೆಯನ್ನೆ ನಡೆಸುತ್ತಾ ಬಂದಿದ್ದಾರೆ. ಅವರ ಬರಹಗಳಲ್ಲಾಗಲಿ ಜೀವನಶೈಲಿಯಲ್ಲಾಗಲಿ ಯಾವುದೇ ಅಬ್ಬರವಿಲ್ಲ. ತಮ್ಮ ತವರು ಜಿಲ್ಲೆಯಾದ ಚಿತ್ರದುರ್ಗದ ಇತಿಹಾಸ, ಅಲ್ಲಿನ ನಾಯಕ ಮನೆತನಗಳ ಬಗ್ಗೆ ಪ್ರಕಟಿಸಿರುವ ಶೋಧಗಳು ನಿರ್ಲಕ್ಷಿಸಲಾರದಂಥವು. ಈ ಕೃತಿಯಲ್ಲಿಯೂ ಚಿತ್ರದುರ್ಗದ ಬರ ಕುರಿತಾದ ಒಂದು ಅಧ್ಯಾಯವೇ ಇದೆ. ಇತರ ಅಧ್ಯಾಯಗಳಲ್ಲೂ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆಗಳಲ್ಲಿ ಮಳೆಗೆ ಸಂಬಂಧಿಸಿದಂತೆ ಮಾಡುವ ಆಚರಣೆಗಳ ವಿವರಗಳಿವೆ.

About the Author

ಲಕ್ಷ್ಮಣ್ ತೆಲಗಾವಿ
(01 January 1947)

ಇತಿಹಾಸಜ್ಞ, ಸಂಶೋಧಕ ಲಕ್ಷ್ಮಣ್‌ ತೆಲಗಾವಿಯವರು 1947 ಜನವರಿ 01 ಹುಟ್ಟಿದ್ದು ಚಿತ್ರದುರ್ಗದಲ್ಲಿ. ಹಲವಾರು ಐತಿಹಾಸಿಕ, ಸಾಮಾಜಿಕ ಚಳುವಳಿಗಳ  ಗ್ರಂಥಗಳ ರಚಿಸಿ ಮತ್ತು ಪ್ರಕಟಿಸಿದ್ಧಾರೆ. ಚಿತ್ರದುರ್ಗ ದರ್ಶಿನಿ, ಇದು ಚಿತ್ರದುರ್ಗ, ಚಿತ್ರದುರ್ಗ ಹ್ಯಾನ್‌ ಇನ್‌ಸೈಟ್‌, ಬುರುಗು (ಚಿಂತನ ಲೇಖನಗಳು), ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ದಲಿತ ಚಳುವಳಿಗಳು, ಮೌರ್ಯ ಮತ್ತು ಶಾತವಾಹನಯುಗ, ಚಿತ್ರದುರ್ಗಜಿಲ್ಲಾ ಇತಿಹಾಸ, ಚಿತ್ರದುರ್ಗ ನಾಯಕ ಅರಸರು, ವಿಜಯನಗರಕಾಲದ ರಾಮಾನುಜಕೂಟಗಳು, ಎಪ್ಪತ್ತೇಳು ಪಾಳಯಗಾರರು, ಚಿತ್ರದುರ್ಗದ ಒನಕೆ ಓಬವ್ವ, ಚಾರಿತ್ರಿಕ ವಿವೇಚನೆ, ದೊಡ್ಡೇರಿಕದನ ಮುಂತಾದ ಕೃತಿಗಳನ್ನು ಸ್ವಾತಿ ಪ್ರಕಾಶನ, ವಾಲ್ಮೀಕಿ ಸಾಹಿತ್ಯ ಸಂಪದ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ...

READ MORE

Related Books