ಬನವಾಸಿಯ ಕದಂಬರು

Author : ಬಿ.ಎಚ್. ಶ್ರೀಧರ

Pages 130

₹ 2.00




Year of Publication: 1966
Published by: ಮ.ಚ. ಒಡೆಯರ
Address: ಶತಮಾನೋತ್ಸವ ಸಮಿತಿ ಬನವಾಸಿ

Synopsys

‘ಬನವಾಸಿ ಕದಂಬರು’ ಕೃತಿಯು ಬಿ.ಎಚ್. ಶ್ರೀಧರ ಅವರು ರಚಿಸಿರುವ ಇತಿಹಾಸ ಕುರಿತ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಇತಿಹಾಸ- ಪುರಾಣಗಳಲ್ಲಿ ಪ್ರಸಿದ್ಧವಾಗಿ ಉಲ್ಲೇಖಿಸಲ್ಪಟ್ಟಿರುವ ಬನವಾಸಿ ಪಟ್ಟಣವು ಉತ್ತರ-ಕನ್ನಡ ಜಿಲ್ಲೆಯ “ಶಿರಸಿ ತಾಲೂಕಿನಲ್ಲಿ ಇದೆ. ಶಿರಸಿ ನಗರದಿಂದ ಬನವಾಸಿ ಪಟ್ಟಣಕ್ಕೆ 14 ಮೈಲು ದೂರ. ಈ ಪಟ್ಟಣವು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಮಧ್ಯದಲ್ಲಿದೆ. ಇಂಥ ಇತಿಹಾಸ ಪ್ರಖ್ಯಾತವಾದ ಬನವಾಸಿ ಪಟ್ಟಣದ ಮತ್ತು ಅದರ ಪ್ರಾಚೀನ ಚಕ್ರಾಧಿಪತ್ಯದ ಬಗ್ಗೆ ಸ್ವತಂತ್ರವಾದ ಒಂದು ಇತಿಹಾಸ ಗ್ರಂಥವನ್ನು ರಚಿಸಬೇಕೆಂದೂ: ಇದನ್ನು ಬನವಾಸಿಯ ಶೇತಕೀ ಶಾಲೆಯ ಶತಮಾನೋತ್ಸವದ ಕಾಲದಲ್ಲಿ ಪಕಟಿಸಬೇಕೆಂದೂ ನಿಶ್ಚಯಿಸಿ ಈ ಬಗ್ಗೆ ಒಂದು ಸಮಿತಿಯನ್ನು ರಚಿಸಲಾಯಿತು. ಬನವಾಸಿಯ ದೇವಾಲಯಗಳು, ನಡೆದು ಬಂದ ಮನೆತನಗಳು: "ಸದ್ಯದ ಜೀವನ ಮುಂತಾದ ವರ್ತಮಾನ ಸಂಗತಿಗಳನ್ನು ಸಂಗ್ರಹಮಾಡಿ ಇದರಲ್ಲಿ ಸೇರಿಸಲಾಗಿದೆ.

About the Author

ಬಿ.ಎಚ್. ಶ್ರೀಧರ
(24 April 1918 - 24 April 1990)

ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್‌ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...

READ MORE

Related Books