ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯ-5ರ ಭಾಗವಾಗಿ ಹಿರಿಯ ಲೇಖಕ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರು ರಚಿಸಿದ ಕೃತಿ-ಸಂಸ್ಕೃತಿ ಸಂಶೋಧನ. ಕೃತಿಗೆ ಮುನ್ನುಡಿ ಬರೆದ ಹಿರಿಯ ಲೇಖಕ ಟಿ.ವಿ. ವೆಂಕಟಾಚಲ ಶಾಸ್ತ್ರೀ ‘ಈ ಕೃತಿಯು ಪ್ರಾಚ್ಯ ಕೋಶಾಗಾರ, ಪ್ರಾಚೀನ ಸಾಹಿತ್ಯ ಕೃತಿಗಳು, ಹಸ್ತಪ್ರತಿಭಂಡಾರ ಹೀಗೆ ವೈವಿಧ್ಯಮಯವಾಗಿ ಒಳಗೊಂಡ ಸಮಗ್ರ ಪರಿಚಯದ ವಿಸ್ತೃತಕಥನದ ಮಾಹಿತಿ ಕೋಶವಾಗಿದೆ’ ಎಂದು ಪ್ರಶಂಸಿಸಿದ್ದಾರೆ. ಲೇಖಕ ‘ಡಾ. ಪಾದೇಕಲ್ಲು ವಿಷ್ಣುಭಟ್ಟ ಅವರು ‘ಈ ಪುಸ್ತಕವು ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಬಗೆಗೆ ರಚಿತವಾಗಿದ್ದರೂ ಇದು ಸಂಶೋಧನ ಗ್ರಂಥವಲ್ಲ; ಸೂಚಿಯೂ ಅಲ್ಲ. ಈ ಗ್ರಂಥದಲ್ಲಿ ವಿಷಯಗಳ ದಾಖಲಾತಿ ಇದೆ. ಮಾಹಿತಿ ಇದೆ. ಕೆಲವು ವಿಷಯಗಳ ಬಗ್ಗೆ ಕ್ರೋಢಿಕೃತ ಪಟ್ಟಿಗಳೂ ಇವೆ. ಸಂಶೋಧನೆಗೆ ಬೇಕಾಗುವ ಮಾಹಿತಿ ಮೂಲಗಳು ಎಲ್ಲೆಲ್ಲಿವೆ ಎಂಬುದನ್ನು ಶೋಧಿಸುವಾಗ ಈ ಪುಸ್ತಕದಲ್ಲಿ ಕೊಡಲಾದ ಮಾಹಿತಿಗಳು ಸಹಾಯಕವಾಗುತ್ತವೆ’ ಎಂದು ಹೇಳಿದ್ದಾರೆ. ಕೃತಿಯಲ್ಲಿ, ಪ್ರಾಚೀನ ಗ್ರಂಥ ರಕ್ಷಣೆ ನಮ್ಮ ಧರ್ಮ, ಪರಿಚಯ, ಹಸ್ತಲಿಖಿತ ಮತ್ತು ಮುದ್ರಿತ ಅಪೂರ್ವ ಗ್ರಂತ ಸಂಚಯ, ಅಪೂರ್ವ ದಾಖಲೆಗಳ ಸಂಗ್ರಹಾಲಯ, ಕೆಲವು ವೈಶಿಷ್ಟ್ಯ ಗಳು, ನಮ್ಮ ಬರವಣಿಗೆಯ ಇತಿಹಾಸ ದರ್ಶನ, ಗ್ರಂಥಸೂಚಿಗಳು ಸಂಶೋಧನೆಗೆ ತೋರುಗಂಬಗಳು, ಗ್ರಂಥ ಸಂಪಾದನ-ಪ್ರಕಾಶನ, ಗ್ರಂತ ಪ್ರದರ್ಶನದಿಂದ ಅರಿವಿನ ವಿಸ್ತರಣೆ, ಸಂಶೋಧನೆಯೆಂಬ ಸತತ ಪ್ರಯಾಣ, ಸಂದರ್ಶಕರಿಗೆ ಪ್ರೇರಣೆ, ವ್ಯವಸ್ಥೆಯ ಹಿನ್ನೆಲೆಯಲ್ಲಿ,ಅನುಬಂಧ ಹಾಗೂ ಸ್ಮೃತಿ ಚಿತ್ರಣ ಹೀಗೆ ವಿಷಯಾನುಕ್ರಮಗಳನ್ನು ಒಳಗೊಂಡಿದೆ.
©2025 Book Brahma Private Limited.