ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರರ ಕಾಯಕಗಳ ಕಥಾನಕವೇ ʼಕ್ರಿಯಾಶೀಲ ಸಹೋದರರುʼ ಕೃತಿ. ಲೇಖಕ ಡಾ.ಬಿ.ಪಿ ಸಂಪತ್ ಕುಮಾರ್, ಧರ್ಮಸ್ಥಳದ ಆಗು ಹೋಗುಗಳ ಹಿನ್ನೆಲೆಯಲ್ಲಿ ಕಾರ್ಯಪ್ರವೃತರಾಗುವ ಸಹೋದರರ ಕಾರ್ಯವ್ಯಾಪ್ತಿ ಮತ್ತು ಕೌಶಲ್ಯಗಳನ್ನು ಈ ಪುಸ್ತಕ ದಾಖಲಿಸುತ್ತ ಹೋಗುತ್ತದೆ.
ಶ್ರೀ.ಡಿ ಸುರೇಂದ್ರ, ಶ್ರೀ ಡಿ. ಹರ್ಷೇಂದ್ರ, ಮತ್ತು ಶ್ರೀ ಡಿ.ರಾಜೇಂದ್ರ ಈ ಸಹೋದರರು ಹಿರಿಯಣ್ಣ ವೀರೇಂದ್ರರೊಂದಿಗೆ ಸೇರಿಕೊಂಡ ಚತುರ್ಭುಜಗಳಾದರೆ, ತಂಗಿ ಶ್ರೀಮತಿ ಪದ್ಮಲತಾ ಅಣ್ಣನ ಕೀರ್ತಿಯನ್ನು ಬೆಳಗುವ ಮಣಿದೀಪವಾಗಿದ್ದರೆ. ಧರ್ಮಸ್ಥಳದ ಕ್ರಿಯಾಶೀಲತೆ ಮತ್ತು ಕಾರ್ಯಕ್ಷೇತ್ರಗಳು ಇಂದು ದೇಶದ ಇತರೆಡೆಗಳಿಗೂ ವ್ಯಾಪಿಸಿ ಸಾಂಗವಾಗುತ್ತಿರುವುದಲ್ಲಿ ಖಾವಂದರ ಸೂಕ್ಷ್ಮ ನೋಟ ಮತ್ತು ಜನತಾಂತರ ದೃಷ್ಟಿಯು ಮುಖ್ಯವಾಗಿದೆ, ಎಂದು ಲೇಖಕರು ವಿಶ್ಲೇಷಿಸಿದ್ದಾರೆ.
©2025 Book Brahma Private Limited.