ಶ್ರೀ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯ-17ನೇ ಕೃತಿಯಾಗಿ ‘ಧರ್ಮೋತ್ಥಾನ’ ಪ್ರಕಟಗೊಂಡಿದೆ. ಲೇಖಕ ಡಾ. ಪುಂಡಿಕ್ಯಾ ಗಣಪಯ್ಯ ಭಟ್ ಅವರು ಸಂಪಾದಿಸಿದ್ದಾರೆ. ಜೀಣೋದ್ಧಾರದ ಜೊತೆಗೆ ಸಾನ್ನಿಧ್ಯವನ್ನು ಉಳಿಸಿ, ವೃದ್ಧಿಸುವುದು ಮುಖ್ಯ (ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ನಡೆಸಿದ ಸಂದರ್ಶನ), ಪರಂಪರೆಯ ಸಂರಕ್ಷಣೆಯ ಪುಣ್ಯಕಾರ್ಯದಲ್ಲಿ ಭಾಗಿಯಾಗುವುದರಿಂದ ಸಂತೋಷ ಮತ್ತು ಆತ್ಮತೃಪ್ತಿ, ಡಿ. ಸುರೇಂದ್ರಕುಮಾರ್ ಅವರ ಮನದ ಮಾತು) , ಪೂಜ್ಯ ಹೆಗ್ಗಡೆಯವರ ಕನಸನ್ನು ನನಸಾಗಿಸುವುದರಲ್ಲೇ ಸಾರ್ಥೈಕ್ಯ (ಎ.ಎಚ್. ಹರಿರಾಮ ಶೆಟ್ಟಿಯವರ ಜೊತೆ ಮಾತುಕತೆ) , ಹಲವರು ಕಂಡಂತೆ, ಸದ್ದಿಲ್ಲದ ಕ್ರಾಂತಿ, ಪುನರುತ್ಥಾನದ ಯಶೋಗಾಥೆ ಅಧ್ಯಾಯಗಳನ್ನು ಒಳಗೊಂಡಿದೆ.
ಕೃತಿಗೆ ಮುನ್ನುಡಿ ಬರೆದ ಸಾಹಿತಿ ಸಿ.ಎಸ್. ಕೇದಾರ ಅವರು ‘ಧರ್ಮೋತ್ಥಾನ ಟ್ರಸ್ಟ್ ಬೆಳೆದು ಬಂದ ಪರಿ, ಉದ್ದೇಶ ಹಾಗೂ ಸಾಧನೆಗಳ ಜೊತೆ ಸ್ಮಾರಕ, ಚರಿತ್ರೆ, ಪರಂಪರೆ, ಸಂರಕ್ಷಣೆ-ಇವೆಲ್ಲವೂ ಈ ಕೃತಿಯಲ್ಲಿ ವಿವಿಧ ಆಯಾಮಗಳಲ್ಲಿ ವೈಚಾರಿಕ ಒಳನೋಟದಿಂದ ಡಾ. ಪುಂಡಿಕ್ಯಾ ಗಣಪಯ್ಯ ಭಟ್ ಅವರ ಬರಹ ಗಮನ ಸೆಳೆಯುತ್ತದೆ. ಇಂತಹ ಒಂದು ವಿಶೇಷ ಹಾಗೂ ಅತ್ಯಪೂರ್ವ ಕಾರ್ಯಗಳನ್ನು ಬರಹ ರೂಪದಲ್ಲಿ ಇಳಿಸುವುದು ಸಾಮಾನ್ಯನವರೆಗೂ ಮನಮುಟ್ಟುವಂತೆ ತಿಳಿಸುವುದು ಸುಲಭ ಸಾಧ್ಯವಲ್ಲ. ಅದೆಲ್ಲವನ್ನೂ ಒಳಗೊಳ್ಳಿಸಿ, ಸುಂದರವಾದ ಆವರಣದೊಂದಿಗೆ ವಿಶಾಲ ವ್ಯಾಪ್ತಿಯ ಬೃಹತ್ ಯೋಜನೆಯ ನೋಟವನ್ನು ಮುನ್ನೋಟದೊಂದಿಗೆ ಲೇಖಕರು ಈ ಮೂಲಕ ಉಣಬಟಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.