ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯದ 4ನೇ ಭಾಗವಾಗಿ ‘ಮರಳಿ ಪ್ರಕೃತಿಗೆ’ ಕೃತಿ ಪ್ರಕಟಗೊಂಡಿದೆ. ಪ್ರಕೃತಿ ಚಿಕಿತ್ಸೆಯಿಂದ ಸ್ವಸ್ಥ ಚಿತ್ತ ಎಂಬ ಉಪಶೀರ್ಷಿಕೆಯ ಹೊಂದಿದೆ. ಲೇಖಕ ಲಕ್ಷ್ಮೀ ಮಚ್ಚಿನ ಅವರು ಬರೆದಿದ್ದಾರೆ. ಆಸ್ಪತ್ರೆ ಆರಂಭಗೊಂಡ ಹಿನ್ನಲೆ, ಪ್ರಕೃತಿ ಚಿಕಿತ್ಸೆ ಎಂದರೆ, ಪ್ರಕೃತಿ ಚಿಕಿತ್ಸೆಗೊಂಡು ಇತಿಹಾಸ, ಔಷಧರಹಿತ ಚಿಕಿತ್ಸೆ, ಮರಳಿ ಪ್ರಕೃತಿಯೆಡೆಗೆ, ಶ್ರೀ ಧ.ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪರೀಕ, ಇಲ್ಲಿ ಏನೆಲ್ಲಾ ಚಿಕಿತ್ಸೆಗಳಿವೆ..., ಸರಕಾರದಿಂದ ಅಂಗೀಕಾರ, ಪ್ರಕೃತಿ ಚಿಕಿತ್ಸೆಯಲ್ಲಿ ಶಿಕ್ಷಣ, ಉಜಿರೆ ಪ್ರಕೃತಿ ಚಿಕಿತ್ಸಾ ಕಾಲೇಜು, ವಿಷವಲ್ಲ: ಡಾ. ಹೆಗ್ಗಡೆ, ಧರ್ಮಸ್ಥಳದಲ್ಲಿ ಯೋಗ, ನೈತಿಕ ಶಿಕ್ಷಣದ ಅಗತ್ಯ ಹೀಗೆ ಒಟ್ಟು 22 ಅಧ್ಯಾಯಗಳನ್ನು ಒಳಗೊಂಡಿದೆ
ಈ ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಾ. ಎಂ. ಮದನಗೋಪಾಲ್ ‘ ನಿಸರ್ಗ ಚಿಕಿತ್ಸೆ ಮತ್ತು ಯೋಗವು ಇಂದಿನ ಆಧುನಿಕ ಬದುಕಿನ ಜಂಜಡಗಳಲ್ಲಿ ಹೇಗೆ ಮನಸ್ಸಿಗೆ ಮತ್ತು ದೇಹಕ್ಕೆ ಉಪಶಮನ ನೀಡಬಲ್ಲುದು ಎಂಬುದನ್ನು ಉದಾಹರಣೆ ಸಹಿತವಾಗಿ ಇದರಲ್ಲಿ ತಿಳಿಸಲಾಗಿದೆ. ಶಾಂತಿವನ ಟ್ರಸ್ಟ್ ನ ಕಾರ್ಯ ಚಟುವಟಿಕೆಗಳನ್ನು ಸರ್ಕಾರಿ ಆರೋಗ್ಯ ಸೇವೆಗಳೊಂದಿಗೆ ಸಂಯೋಜಿಸಿ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನವಚೇತನ ನೀಡುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಸಾರ್ಥಕ ಪ್ರಯತ್ನ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.