ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯದ 16ನೇ ಭಾಗವಾಗಿ ಈ ಕೃತಿ ಪ್ರಕಟಗೊಂಡಿದೆ. ಲೇಖಕರಾದ ಡಾ. ಎಂ. ಪ್ರಭಾಕರ ಜೋಶಿ ಹಾಗೂ ಉಜಿರೆ ಎನ್. ಅಶೋಕ ಭಟ್ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿ ಯಕ್ಷ ಸುವರ್ಣ, ಪೂಜ್ಯ ಹೆಗ್ಗಡೆಯವರ ಸಂದರ್ಶನ, ಪೂಜ್ಯ ಹೆಗ್ಗಡೆಯವರ ಆಸಕ್ತಿ-ವಿಮರ್ಶೆ-ಸ್ವಾರಸ್ಯ, ಪೂಜ್ಯ ಹೆಗ್ಗಡೆಯವರ ಅನುಸರಣೀಯ ಉಪಕ್ರಮ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಲೇಖನಿಯಿಂದ, ಪೂಜ್ಯರ ಅನುಭವ ಕಥನ, ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಅಭಿಮತ, ದೊಡ್ಡಮ್ಮ ಕಲಾವಿದರ ಮಾತೃಶ್ರೀಯವರು, ಜವಾಬ್ದಾರಿ-ಆತಂಕ-ಸಂತೋಷ-ಸಾರ್ಥಕ್ಯ, ಡಿ. ಹರ್ಷೇಂದ್ರ ಕುಮಾರ್-ಸಂದರ್ಶನ ಸಾರಾಂಶ, ಶ್ರೀಧರ್ಮಸ್ಥಲ ಸಣ್ಣಮೇಳ, ಯಕ್ಷಗಾನ ತಾಳಮದ್ದಳೆಗೆ ಘೋಷಣೆ, ಶ್ರೀ.ಧ.ಮಂ. ಶಿಕ್ಷಣ ಸಂಸ್ಥೇಗಳಲ್ಲಿ ಯಕ್ಷಗಾನ ಸೇರಿದಂತೆ ಒಟ್ಟು 26 ಅಧ್ಯಾಯಗಳ ಒಳಗೊಂಡಿವೆ. ಸಾಹಿತಿ ಡಾ. ಕೆ.ಎಂ. ರಾಘವ ನಂಬಿಯಾರ್ ಅವರು ಕೃತಿಗೆ ಮುನ್ನುಡಿ ಬರೆದು ‘ಮೈಸೂರಿನ ಮಹಾರಾಜರು ನಮ್ಮ ಆಸ್ಥಾನದ ಆಟದ ಮೇಳಕ್ಕೆ ಭಾಗವತರು ಹಾಗೂ ವಿವಿಧ ವಿಭಾಗಗಳ ಕಲಾವಿದರನ್ನು ಕಳುಹಿಸಿಕೊಡಬೇಕೆಂದು ಧರ್ಮಸ್ಥಳದ ಆಗಿನ ಹೆಗ್ಗಡೆಯವರಲ್ಲಿ ಕೋರಿಕೆಯಿಡುತ್ತಾರೆಂದರೆ ಆ ಕಾಲದ ಆಟದ ಗುಣಮಟ್ಟ ಎಂತಹದ್ದು ಆಗಿತ್ತೆಂಬುದು ಸ್ಪಷ್ಟವಾಗುತ್ತದೆ. ಆಟದ ಗುಣ ಮೇಲ್ಮೆಗೂ ಧರ್ಮಸ್ಥಳ ಮೇಳಕ್ಕೆ ಭವ್ಯ ಪರಂಪರೆ ಉಂಟೆಂಬುದೂ ಹೀಗೆ ಸುವ್ಯಕ್ತ.’ಹೆಗ್ಗಡೆ ಕುಟುಂಬದವರ ಸಂದರ್ಶನಗಳಲ್ಲಿ ಮೇಳದ ಬಗೆಗಗೆ ಬಹುವಾದ ಮಾಹಿತಿಗಳು, ಅವರ ಕಾಳಜಿಗಳು ವ್ಯಕ್ತವಾಗಿವೆ. ಅಲ್ಲದೇ ಆಟದ ನಿಯಮಾವಳಿ, ಮೇಳದ ವಿಶೇಷತೆಗಳು ಕಲಾಕಾರರ ಸೇವಾವಧಿ, ಪ್ರಸಾದನ ಸಾಮಗ್ರಿಗಳ ರಚನೆಯ ಶಿಲ್ಪಿಗಳು ಸಹಾಯಕ ಸಿಬ್ಬಂದಿಯ ವಿವರ ಇತ್ಯಾದಿ ಒಳಗೊಂಡ ಮಾಹಿತಿ ಸಮಗ್ರತೆ ಒದಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.