ಲೇಖಕ ಶಿವಾನಂದ ಕಳವೆ, ಅವರ ಕೃತಿ-ಜಲ ಗಣ ಮನ. ಖ್ಯಾತ ಪರಿಸರವಾದಿ ಡಾ. ಅ.ನ ಎಲ್ಲಪ್ಪ ರೆಡ್ಡಿ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ‘ಗ್ರಾಮಾಭ್ಯುದಯದ ಹಸಿರು ಅರ್ಥಶಾಸ್ತ್ರ ಕೃತಿಯ ಪರಿಕಲ್ಪನೆಯಡಿಯಲ್ಲಿ ಪರಿಸರ ಸಂವರ್ಧನೆಯನ್ನೇ ಉಸಿರಾಗಿಸಿಕೊಂಡ ಹಳ್ಳಿಗರ ಹಾಗೂ ಕಾರ್ಯಕರ್ತರ ಧ್ವನಿಗಳನ್ನು ಕೇಳಿಸಿದ್ದಾರೆ. ಸುಮಾರು ಎರಡೂವರೆ ದಶಕಗಳಿಂದ ಕರ್ನಾಟಕ ರಾಜ್ಯದ ಹಲವಾರು ಜಿಲ್ಲೆಗೆ ಭೇಟಿ ನೀಡಿ ಅಲ್ಲಿಯ ಜೀವ ವೈವಿಧ್ಯತೆಯನ್ನು ಹಾಗೂ ಪರಂಪರೆಯ ಜ್ಞಾನಗಳನ್ನು ದಾಖಲಿಸುತ್ತಿದ್ದಾರೆ. ವ್ಯಕ್ತಿಯಾಗಿ ಒಂದು ಸಂಸ್ಥೆಯಂತೆ ನಿರಂತರವಾಗಿ ಕೆಲಸವನ್ನು ಮಾಡುತ್ತಿರುವ ಶಿವಾನಂದ ಕಳವೆ ಈ ಕೃತಿಯಲ್ಲಿ, ಕೆರೆ ಕಾಯಕದಲ್ಲಿ ಧರ್ಮಸ್ಥಳದ ಕೊಡುಗೆಗಳೇನು? ಬರ ನಿವಾರಣೆಗೆ ಸಮುದಾಯ ನೇತೃತ್ವದಲ್ಲಿ ಕೆರೆಗಳ ಪುನರುಜ್ಜೀವನ ಹೇಗೆ ನಡೆಯಿತು? ಇದರ ಫಲಾಫಲಗಳೇನು ಎಂಬುದನ್ನು ಸ್ವತಃ ಕ್ಷೇತ್ರ ಭೇಟಿಯ ಮೂಲಕ ಪರಿಣಾಮಕಾರಿಯಾಗಿ ದಾಖಲಿಸಿದ್ದಾರೆ. ಬಹಳಷ್ಟು ಜನಕ್ಕೆ ಅರಣ್ಯ ಜೀವವೈವಿಧ್ಯತೆ, ನೆಲ, ಜಲ, ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.