ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯದ 13ನೇ ಭಾಗವಾಗಿ ಈ ಕೃತಿ ಪ್ರಕಟಗೊಂಡಿದ್ದು, ಲೇಖಕ ಡಾ. ವಸಂತಕುಮಾರ ಪೆರ್ಲ ಅವರು ರಚಿಸಿದ್ದಾರೆ. ಧರ್ಮಸ್ಥಳದ ಒಳಾಡಳಿತ (ಪದ್ಧತಿ-ಪರಂಪರೆ--ವಿಕಾಸಗೊಂಡ ಕಥನ), ಆಬಿವೃದ್ಧಿಯ ಶೆಕೆ (ವ್ಯವಸ್ಥೆಯಲ್ಲಿ ಆಧುನಿಕತೆಯ ಸ್ಪರ್ಶ), ಮಾದರಿ ಆಗಬೇಕೆಂಬುದೇ ನಮ್ಮ ಕನಸು (ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಒಂದು ಸಂರ್ದಶನ) ಹೀಗೆ ವಿವಿಧ ಅಧ್ಯಾಯಗಳಡಿ ಹತ್ತು ಹಲವು ವಿಷಯಗಳು ಒಳಗೊಂಡವೆ.
ಕೃತಿಗೆ ಮುನ್ನುಡಿ ಬರೆದ ಸಾಹಿತಿ ವೇದಮೂರ್ತಿ ಶ್ರೀ ಕೆ. ಲಕ್ಷ್ಮಿನಾರಾಯಣ ಅಸ್ರಣ್ಣ ‘ಧಾರ್ಮಿಕ ಕ್ಷೇತ್ರ ಕೇವಲ ಆಕರ್ಷಣೆಯ ಕೇಂದ್ರವಾಗಿರದೇ ಜನಜೀವನ ಸಮಗ್ರತೆಗೆ ಪೋಷಣೆಯನ್ನು ನೀಡಬೇಕಾಗುತ್ತದೆ. ಧಾರ್ಮಿಕತೆಯೊಂದಿಗೆ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ, ಆರೋಗ್ಯ ಹೀಗೆ ಬಹುಮುಖಿ ನೆಲೆಯಲ್ಲಿ ತೆರೆದುಕೊಳ್ಳಬೇಕಾಗುತ್ತದೆ. ಭಕ್ತಿ-ಭಾವ-ಹೃದಯಗಳ ಸಂಗಮ ಕ್ಷೇತ್ರವಾಗಿಯೂ ಇರಬೇಕಾಗುತ್ತದೆ. ಶ್ರೀಕ್ಷೇತ್ರ ಧರ್ಮಶ್ಥಳದಲ್ಲಿ ಅವೆಲ್ಲವೂ ಮೇಳೈಸಿಕೊಂಡಿರುವುದನ್ನು ನಾವು ಗಮನಿಸಬಹುದು. ಶ್ರೀ ಕ್ಷೇತ್ರ ಬೆಳೆದು ಬೆಳಗಬೇಕಿದ್ದರೆ ಇಲ್ಲಿನ ಆಡಳಿತ ವ್ಯವಸ್ಥೆಗಳು, ಧಾರ್ಮಿಕ ಕಟ್ಟುಕಟ್ಟಳೆಗಳು ಅನುಚಾನವಾಗಿ ನಡೆದುಕೊಂಡು ಬರುತ್ತಿರುವುದೇ ಆಗಿದೆ. ಅದಕ್ಕೆಲ್ಲ ಅಲ್ಲಲ್ಲಿಗೆ ಸಲ್ಲುವ ಜವಾಬ್ದಾರಿ ಸ್ಥಾನಗಳನ್ನು ಅದನ್ನು ನಿರ್ವಹಿಸಬಲ್ಲ ವ್ಯಕ್ತಿಗಳು ಒಟ್ಟು ವ್ಯವಸ್ಥೆಯ ಭಾಗವಾಗಿ ಶ್ರೀಕ್ಷೇತ್ರದ ಒಳ-ಹೊರಗಿನ ಸೌಂದರ್ಯಕ್ಕೆ ಕಾರಣವಾಗಿರುವುದು ಈ ಕೃತಿಯಲ್ಲಿ ವಿಶದೀಕರಿಸಲ್ಪಟ್ಟಿದೆ’ ಎಂದು ಪ್ರಶಂಸಿಸಿದ್ದಾರೆ. .
©2024 Book Brahma Private Limited.