ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಲೋಕಮಾನ್ಯ ಸಾಧನೆಗಳನ್ನು ವಿವರಿಸುವ ಕೃತಿ-ಸಾಧನೆಯ ಪಥದಲ್ಲಿ ಸುವರ್ಣ ಹೆಜ್ಜೆಗಳು. ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯ-12ರ ಭಾಗವಾಗಿ ಲೇಖಕ ಚಂದ್ರಶೇಖರ ಎಸ್ ಅಂತರ ಅವರು ಈ ಕೃತಿ ರಚಿಸಿದ್ದಾರೆ.
ಎಳೆಯ ವಯಸ್ಸಿನಲ್ಲಿ ಪಟ್ಟಾಭಿಷಿಕ್ತರಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಶ್ರೀ ಕ್ಷೇತ್ರವನ್ನು ಖಾವಂದರು ಮುನ್ನಡೆಸಿದ ರೀತಿ, ಅವರ ಚಾಕಚಕ್ಯತೆ, ದೇವಳದ ನವೀಕರಣ ಸಹಿತ ನವ ಧರ್ಮಸ್ಥಳದ ನಿರ್ಮಾಣ, ಸ್ವಚ್ಛತೆಗೆ ಆದ್ಯತೆ, ಜನಸಾಮಾನ್ಯರೆಡೆಗಿನ ನಡಿಗೆ, ಗ್ರಾಮಾಭಿವೃದ್ಧಿ, ಸ್ವ ಉದ್ಯೋಗಕ್ಕಾಗಿ ರುಡ್‌ಸೆಟ್ ಸಾರಸತ್ವ, ಸಾಂಸ್ಕೃತಿಕ ಲೋಕಕ್ಕೆ ಅವರ ಕೊಡುಗೆ , ಸರ್ವಧರ್ಮ ಸಮನ್ವತೆಯ ವಿಚಾರಧಾರೆ, ವೈಭವಗಳನ್ನು ಹೊತ್ತು ತಂದ ತುಳು ಸಮ್ಮೇಳನ , ಕೃಷಿ ಮೇಳಗಳ ಬಗೆಗಿನ ವೈವಿಧ್ಯತೆಯನ್ನು ಕೃತಿಯಲ್ಲಿ ಉಲ್ಲೇಖಿಸಲಾಗಿದೆ.
‘ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರ ಸುವರ್ಣ ಹೆಜ್ಜೆಗಳ ಗುರುತು, ಅವರ ವ್ಯಕ್ತಿತ್ವ, ರೂಪಿಸಿದ ಯೋಜನೆಗಳ ಅನುಷ್ಠಾನದ ಮೇಲಿರುವ ಬದ್ಧತೆ, ಸಾಮಾಜಿಕ ದೃಷ್ಠಿಕೋನ, ಸಮಾಜ ಸುಧಾರಣೆ, ಸಾಮಾಜಿಕ ಸಾಹಚರ್ಯೆಯನ್ನು ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಕಟ್ಟಿಕೊಡಲಾಗಿದೆ’ ಎಂದು ಕೃತಿಗೆ ಮುನ್ನುಡಿ ಬರೆದ ಚಿಂತಕ ಡಾ. ಬಿ. ಯಶೋವರ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
©2024 Book Brahma Private Limited.