ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯ-20ರ ಭಾಗವಾಗಿ ಲೇಖಕರಾದ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಡಾ. ಆರ್.ಟಿ. ಜಂತಲಿ ಅವರು ಸಂಯುಕ್ತವಾಗಿ ರಚಿಸಿದ ಕೃತಿ-ಜ್ಞಾನಯಜ್ಞ. ಹಿರಿಯ ಸಾಹಿತಿ ಡಾ. ಕೆ. ಚಿದಾನಂದ ಗೌಡ ಅವರು ಕೃತಿಗೆ ಮುನ್ನುಡಿ ಬರೆದು ಪೂಜ್ಯಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅದ್ಧಬುತವಾದ ಸಾಮಾಜಿಕ ಕೊಡುಗೆಗಳ ಕುರಿತಾಗಿ ತಿಳಿಗನ್ನಡದಲ್ಲಿ, ಸುಲಲಿತವಾದ ಶೈಲಿಯಲ್ಲಿ ಹೃದಯಂಗಮವಾಗಿ ಕೃತಿ ರಚಿಸಿದ್ದು ಸಾರ್ಥಕ’ ಎಂದು ಪ್ರಶಂಸಿಸಿದ್ದಾರೆ.
‘ಶೈಕ್ಷಣಿಕ ಕೇಂದ್ರಗಳ ಸ್ಥಾಪನೆ, ನಿರ್ವಹಣೆ ಮತ್ತು ರಾಷ್ಟ್ರಮಟ್ಟದಲ್ಲಿ ‘ಎ ಗ್ರೇಡ್’ ಮನ್ನಣೆಯನ್ನು ಗಳಿಸುವಲ್ಲಿ ಮಾರ್ಗದರ್ಶನ ನೀಡಿದ ಹೆಗ್ಗಡೆಯವರದ್ದು ಸಿಂಹನಡಿಗೆ. ವಿದ್ಯಾದಾನಕ್ಕೆ ಸಂಬಂಧಿಸಿದ ಒಂದು ಪ್ರತೇಕ ಸಂಶೋಧನೆಗೆ ಮತ್ತು ಬೃಹತ್ ಮಹಾಪ್ರಬಂಧಕ್ಕೆ ವಸ್ತುವಾಗುವಷ್ಟು ಇದೆ. ಸೂರ್ಯನನ್ನು ದೀಪ ಹಿಡಿದು ವಿವರಿಸುವ ಕೆಲಸವಷ್ಟೇ ಈ ಕೃತಿಯಲ್ಲಿ ಸಾಧ್ಯವಾಗಿದೆ’ ಎಂದು ಶ್ರೀ ವೀರೇಂದ್ರ ಹೆಗ್ಗಡೆ ಅವರ ಶೈಕ್ಷಣಿಕ ಸಾಧನೆಗಳನ್ನುಲೇಖಕರು ವಿವರಿಸಿದ್ದಾರೆ. ಸುಧಾರಣೆಯ ಕಡಿತ, ಬುನಾದಿಯಲ್ಲೇ ಜೀವನ ಶಿಕ್ಷಣ, ಪ್ರಗತಿಯ ದ್ವಾರ ತೆರೆದ ಉನ್ನತ ಶಿಕ್ಷಣ, ಎಸ್.ಡಿ.ಎಂ. ಎಂಬ ಬ್ಯ್ರಾಂಡ್ ನೇಮ್, ಧಾರವಾಡದ ವಿದ್ಯಾಗಿರಿಯಿಂದ ಬೆಳಗಿದ ಹಣತೆಗಳು, ಉಪಸಂಹಾರ ಮುಗಿಯದ ಶಿಕ್ಷಣ ಪಯಣ ಹೀಗಿ ವೈವಿಧ್ಯಮಯ ಅಧ್ಯಾಯಗಳು ಕೃತಿಯಲ್ಲಿ ಒಳಗೊಂಡಿವೆ.
©2024 Book Brahma Private Limited.