ಸದಾ ಸಹಸ್ರಾರು ಯಾತ್ರಿಕರಿಂದ ಜಿನುಗುಟ್ಟುವ ಧಮಸ್ಥಳದ ಚಟುವಟಿಕೆಗಳ ಕಾರ್ಯವ್ಯಾಪ್ತಿ ದೊಡ್ಡದು. ಶ್ರೀ ಕ್ಷೇತ್ರದಲ್ಲಿ ಪೂಜೆ ಪುರಸ್ಕಾರಗಳ ನಿತ್ಯೋತ್ಸವವಲ್ಲದೆ ಸಂಸ್ಕೃತಿಯ ಛಾಪನ್ನು ಸಾರುವ ಸಂಗೀತ, ಸಂಸ್ಕೃತಿ, ಸಾಹಿತ್ಯ, ಯಕ್ಷಗಾನ ಪೂರಕ ಲಲಿತಕಲೆಗಳಿಗೂ ಪ್ರತ್ಯೇಕ ವೇದಿಕಾ ರಂಗವಿದೆ. ಶೈಕ್ಷಣಿಕ ವಿಚಾರಗಳಲ್ಲಿ ತನ್ನದೇ ರಿವಾಜುಗಳನ್ನ ಹೊತ್ತು ಶಿಕ್ಷಣ, ಪ್ರಕೃತಿ ಚಿಕಿತ್ಸೆ, ಸ್ತ್ರೀ ಸಬಲೀಕರಣ , ವ್ಯಸನಮುಕ್ತ ಸುಖೀಜೀವನ, ಚತುರ್ವಿಧ ದಾನಾದಿ ಸಮಾಜಮುಖಿ, ಜೀವನ್ಮುಖಿಯಂತಹ ಚಟುವಟಿಕೆಗಳನ್ನ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಆ ಬ್ರಹ್ಮಾಂಡದ ಸಂಕ್ಷಿಪ್ತ ಚಿತ್ರಣ ಮತ್ತು ದರ್ಶಣ ಒಟ್ಟಿಗೆ ಈ ಪುಸ್ತಕದಲ್ಲಿ ಪಡೆಯಬಹುದು ಎಂಬುದನ್ನು ನಾಡೋಜ ಪ್ರೊ. ಹಂಪ ನಾಗರಾಜಯ್ಯ ಮುನ್ನುಡಿಯಲ್ಲಿ ಬರೆದಿದ್ದಾರೆ. ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಶ್ರೀ ಕ್ಷೇತ್ರದ ಸೇವಾ ವಿಭಾಗಗಳಿಗೂ ಹೊಸ ಆಯಾಮವನ್ನು ನೀಡುದುದಲ್ಲದೆ ಸಾರ್ವಜನಿಕರ , ಭಕ್ತರ ಹಾಗೂ ಅಭಿಮಾನಿಗಳ ಬೇಡಿಕೆಗೆ ನಿರಂತರವಾಗಿ ಧರ್ಮಸ್ಥಳ ಕ್ಷೇತ್ರವು ಸ್ಪಂದಿಸುತ್ತಾ ಬಂದಿದೆ. ಇದೇ ಕಾರಣದಿಂದ ಶ್ರೀ ಕ್ಷೇತ್ರಕ್ಕೆ ವಿಶ್ವಮಟ್ಟದ ಮಾನ್ಯತೆ ಪ್ರಾಪ್ತವಾಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ಡಾ.ಡಿ ವಿರೇಂದ್ರ ಹೆಗ್ಗಡೆಯವರು ಈ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.