ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯದ ಭಾಗ-3ರ ಕೃತಿಯಾಗಿ ಪ್ರಕಟಗೊಂಡಿದ್ದು, ಲೇಖಕ ಪ್ರೊ. ಎಂ.ಎ. ಹೆಗಡೆ ಅವರು ರಚಿಸಿದ್ದಾರೆ. ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಕೃತಿಗೆ ಮುನ್ನುಡಿ ಬರೆದು ‘ಅಧ್ಯಾತ್ಮಿಕ ವ್ಯಕ್ತಿತ್ವವನ್ನು ಜಾಗೃತಗೊಳಿಸುವ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಇವುಗಳು ನಮ್ಮ ಬರಹದ ಸೀಮೆಯೊಳಗೆ ಸಿಗದಂತಹ ಸಾಧನಗಳಾಗಿವೆ. ಇವುಗಳನ್ನು ಸೀಮಿತ ಪದಗಳ ಮೂಲಕ ಸೆರೆ ಹಿಡಿಯುವ ಪ್ರಯತ್ನವನ್ನು ‘ಬೋಧಿಯ ನೆರಳಲ್ಲಿ’ ಎಂಬ ಗ್ರಂಥದಲ್ಲಿ ಮಾಡಲಾಗಿದೆ. ಗ್ರಂಥಕರ್ತರಾದ ಪ್ರೊ. ಎಂ.ಎ. ಹೆಗಡೆ ಅವರು ವಿದ್ವತ್ಪೂರ್ಣವಾಗಿ ಕ್ಷೇತ್ರದ ಸಾಧನೆಗಳನ್ನು ಸೆರೆ ಹಿಡಿದಿದ್ದಾರೆ. ಅವರ ವಿದ್ವತ್ತು ಬರಹಗಳಲ್ಲಿ ಪ್ರತಿಫಲಿಸಿದೆ’ ಎಂದು ಶ್ಲಾಘಿಸಿದ್ದಾರೆ. ಡಿ. ಹರ್ಷೇಂದ್ರಕುಮಾರ ಅವರು ಕೃತಿಯ ಸಂಪಾದಕರು.
©2025 Book Brahma Private Limited.