ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯ-14ರ ಭಾಗವಾಗಿ ಲೇಖಕ ವಿಜಯಕುಮಾರ ಧ. ನೇರ್ಲೆಕರ್ ಅವರು ರಚಿಸಿದ ಕೃತಿ-ಶ್ರೇಯಸ್ಸು. ಸಿಂಡಿಕೇಟ್ ಬ್ಯಾಂಕ್ ಸಹಾಯಕ ಪ್ರಬಂಧಕ ಹಾಗೂ ರಾಷ್ಟ್ರೀಯ ನಿರ್ದೇಶಕ ಕೆ.ಎನ್. ಜನಾರ್ದನ್ ಅವರು ಕೃತಿಗೆ ಮುನ್ನುಡಿ ಬರೆದು ‘ ರುಡ್ ಸೆಟ್ ಸಂಸ್ಥೆಯು ನಡೆದು ಬಂದ ದಾರಿ ಹಾಗೂ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಅಭಿವೃದ್ಧಿಯಡಿ ನಿರುದ್ಯೋಗ ನಿವಾರಣೆಯತ್ತ ಇರುವ ಕಳಕಳಿಯನ್ನು ಈ ಕೃತಿಯು ಸಮರ್ಥವಾಗಿ ದಾಖಲಿಸಿದೆ’ ಎಂದು ಪ್ರಶಂಸಿಸಿದ್ದಾರೆ.
ರುಡ್ ಸೆಟ್ ನೊಂದಿಗಿನ ಸಂಪರ್ಕ, ಸಂಬಂಧಗಳನ್ನು ಹಾಗೂ ಈ ಸಂಸ್ಥೆ ಬೆಳೆಸುವಲ್ಲಿ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರ ಮೌಲಿಕ ಮಾರ್ಗದರ್ಶನ ಕುರಿತು ಮಾತ್ರವಲ್ಲ; ರುಡ್ ಸೆಟ್ ಧ್ಯೇಯೋದ್ದೇಶ, ರುಡ್ ಸೆಟ್ ಪರಿಕಲ್ಪನೆ, ಆಡಳಿತ ವೈಖರಿ, ಯಶಸ್ಸಿನ ರೂವಾರಿ, ಉದ್ಯಮಶೀಲತಾ ತಿಳಿವಳಿಕೆ ಮತ್ತು ಪ್ರೇರಣಾ ಶಿಬಿರ, ರುಡ್ ಸೆಟ್ ಬಜಾರ್ ಮತ್ತು ಮಳಿಗೆಗಳು, ರುಡ್ ಸೆಟ್ ಮಾದರಿ : ಸಮನ್ವಯತೆಯೊಂದಿಗೆ ಕಾರ್ಯನಿರ್ವಹಣೆ, ರಾಷ್ಟ್ರೀಯ ರುಡ್ ಸೆಟ್ ಅಕಾಡೆಮಿ, ಸ್ವ-ಉದ್ಯೋಗಿಗೆ ಕಿವಿಮಾತು, ಸ್ವ ಉದ್ಯಮಿ-ಆತ್ಮನಿರೀಕ್ಷಣೆ, ಸ್ವ-ಉದ್ಯೋಗದಲ್ಲಿ ಯಶಸ್ವಿಯಾಗಲು ಸೂತ್ರಗಳು ಹೀಗೆ ವೈವಿಧ್ಯಮಯವಾದ ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.