ಒಂದು ಜನಾಂಗದ ಜೀವನ ವಿಧಾನವನ್ನು ಸಂಸ್ಕೃತಿಯ ರೂಪದಲ್ಲಿ ಬಿತ್ತರಿಸುವ ಅಸ್ತ್ರ ಸಾಹಿತ್ಯ. ಲೇಖಕಿ ಡಾ. ಚೂಡಾಮಣಿ ನಂದಗೋಪಾಲ್, ದೇಶದ ಬಹುತೇಕ ಸಂಗ್ರಹಾಲಯಗಳು ಒಂದಿಲ್ಲೊಂದು ನ್ಯೂನತೆಯಿಂದ ಸೊರಗುವುದೇ ಅತಿಯಾಗಿದೆ. ಆದರೆ, ಮಂಜೂಷಾ ಇವೆಲ್ಲಾ ನ್ಯೂನತೆಗಳನ್ನು ಮೀರಿ ನಿಂತು ಕಾರ್ಯನಿರ್ವಹಿಸುತ್ತದೆ ಎಂಬುದನ್ನು ʼಮಂಜೂಷಾ ಕರಂಡʼ ಕೃತಿಯಲ್ಲಿ ಸಾದರಪಡಿಸಿದ್ದಾರೆ.
ಸತ್ವಯುತ ಸಂಸ್ಕೃತಿಯ ಅಂಶಗಳಾದ ನಂಬಿಕೆ, ಚಿಂತನೆ, ಮೌಲ್ಯ, ಇತ್ಯಾದಿ ರೂಪಗಳು ಕಾಲಕಾಲಕ್ಕೆ ಬದಲಾವಣೆ ಹೊಂದುವುದು ಅನಿವಾರ್ಯ. ಒಂದು ಹಂತದಲ್ಲಿ ಪೀಳಿಗೆಗಳ ಹೊಸ ಮೌಲ್ಯಗಳ ದಾಳಿಗೆ ತುತ್ತಾಗುತ್ತದೆ. ಸಂಸ್ಕೃತಿಯ ಅಂತರ್ಗತ ಸತ್ವದ ಕಾರಣದಿಂದ ಮತ್ತೊಂದು ಹಂತದಲ್ಲಿ ಪುನರುತ್ಥಾನ ಹೊಂದಲು ಸಾಧ್ಯವಿದೆ. ಮಂಜೂಷಾ ಸಂಗ್ರಹಾಲಯ ಸಂಸ್ಕೃತಿಯ ಕುರುಹುಗಳನ್ನು ಸಂರಕ್ಷಿಸಿಕೊಳ್ಳುತ್ತಿದೆ. ಅಂತಹ ಸಂಸ್ಕೃತಿಯ ಜೀವಾಳವಾದ ವಿಚಾರಗಳನ್ನು ಹೊತ್ತ ದೃಶ್ಯಗಳ ಜೊತೆಗಿನ ವಿಚಾರ ಸರಪಳಿಗಳು ಈ ಪುಸ್ತಕದಲ್ಲಿ ಕಾಣಬಹುದು.
ಕೃತಿಗೆ ಮುನ್ನುಡಿ ಬರೆದ ಪ್ರೊ. ತುಕಾರಾಮ್ ಪೂಜಾರಿ ಅವರು‘ಸಂಗ್ರಹಾಲಯವು ಎಲ್ಲ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಇಲ್ಲಿನ ಪ್ರದರ್ಶನ ವ್ಯವಸ್ಥೆ ಶಿಸ್ತು, ಅನುಕರಣಯೋಗ್ಯ. ಒಟ್ಟಿನಲ್ಲಿ ಮಂಜೂಷಾ ರಾಷ್ಟ್ರದ ಯಶಸ್ವೀ ಸಂಗ್ರಹಾಲಯಗಳ ಸಾಲಿನಲ್ಲಿ ನಿಲ್ಲಬಲ್ಲ ಗುಣಲಕ್ಷಣಗಳನ್ನು ಹೊಂದಿದೆ ಎಂಬುದೇ ನಮ್ಮ ಹೆಮ್ಮೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.