ಧರ್ಮಸ್ಥಳದ ಬೀಡಿನ ಮನೆತನಕ್ಕೆ ಸೊಸೆಯಾದ ಹೇಮಾವತಿ ಹೆಗ್ಗಡೆಯವರ ವೈವಾಹಿಕ ಜೀವನದ ಕುರಿತ ವಿಚಾರಗಳನ್ನು ಎಳೆ ಎಳೆಯಾಗಿ ಕಟ್ಟಿಕೊಟ್ಟಿದ್ದಾರೆ, ಲೇಖಕಿ ರಾಜ್ಯಶ್ರೀ ಎಚ್. ಎನ್. ಹೇಮಾವತಿ ವೀ. ಹೆಗ್ಗಡೆಯವರು ತಮ್ಮ ಎಳೆಯ ವಯಸ್ಸಿನಲ್ಲಿ ಕಂಡುಂಡ ಕೂಡುಕುಟುಂಬದ ಬಾಳು ಬದುಕನ್ನು ಚಿತ್ರಿಸಿದುದರ ಕುರಿತಾಗಿ ಇಂದಿನ ತಲೆಮಾರಿಗೆ ಅಗತ್ಯವಾಗಿ ಹೇಳಬೇಕಾದ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ತಮ್ಮ ಅರ್ಧಾಂಗಿ ಹೇಮಾವತಿ ಹೆಗ್ಗಡೆಯವರ ಸಾಂಸಾರಿಕ , ವ್ಯಾವಹಾರಿಕ, ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಚಿತ್ರಣವನ್ನು ಈ ಪುಸ್ತಕದ ಮುಖೇನ ತಿಳಿಸಿದ್ದಾರೆ. ಸುಖ ಸಂತೋಷಗಳಿರುವುದು ಹೊಸ ಹೊಸ ಸಾಧನ ಸಂಪತ್ತುಗಳಿಂದಲ್ಲ. ಅದಿರುವುದು ಸಹಬಾಳ್ವೆಯ , ಸೌಹಾರ್ದದ ಸಂತೃಪ್ತಿಯಲ್ಲಿ ಎಂದು ತಿಳಿಯಬೇಕಾದರೆ ಹೊಸ ತಲೆಮಾರು ಹೇಮಾವತಿ ವೀ. ಹೆಗ್ಗಡೆಯವರ ಎಳೆಯಬಾಳಿನ ಜೀವನೋಲ್ಲಾಸದ ವಿವರಗಳನೊಮ್ಮೆ ಓದಬೇಕು ಎಂದು ಮುನ್ನುಡಿಯಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿವರಿಸಿದ್ದಾರೆ.
©2024 Book Brahma Private Limited.