ಶ್ರೀ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಪುಸ್ತಕ ಮಾಲಿಕೆಯಡಿ ಸುವರ್ಣ ಸಂಚಯದ -9ನೇ ಕೃತಿಯಾಗಿ ‘ದಾನ ಪುರುಷಾರ್ಥ’ ಪ್ರಕಟವಾಗಿದೆ. ಡಾ. ಪ್ರಸನ್ನಕುಮಾರ ಐತಾಳ್ ಅವರು ಲೇಖಕರು. ದಾನ ಮತ್ತು ದಾನದ ಮಹತ್ವ, ಚತುರ್ವಿಧ ದಾನಗಳು ಮತ್ತು ಮಹತ್ವ, ಧರ್ಮಸ್ಥಳದಲ್ಲಿ ದಾನಗಳ ಪರಂಪರೆ, ಶ್ರೀಕ್ಷೇತ್ರದ ಮುಖೇನ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರ ಚತುರ್ವಿಧ ದಾನಗಳು, ಸಮುದಾಯ ಅಭಿವೃದ್ಧಿ ಹರಿಕಾರ ಡಾ. ಶ್ರೀ ಹೆಗ್ಗಡೆಯವರು ಹಾಗೂ ಕೊನೆಯಲ್ಲಿ ಪೂಜ್ಯ ಖಾವಂದರೊಂದಿಗೆ ಆಪ್ತ ಸಂವಾದ, ಉಪಸಂಹಾರ ಮತ್ತು ಆಧಾರ ಗ್ರಂಥಗಳು ಹೀಗೆ ವೈವಿಧ್ಯಮಯವಾಗಿ ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ.
ಕೃತಿಗೆ ಮುನ್ನುಡಿ ಬರೆದ ಪ್ರೊ. ಎಂ. ರಾಮಚಂದ್ರ ಅವರು ‘ಧರ್ಮಸ್ಥಳದಲ್ಲಿ ದಾನ ಎಂಬುದು ಒಂದು ಪರಂಪರೆಯೇ ಆಗಿದೆ. ಚತುರ್ದಾನಗಳೊಂದಿಗೆ ಇತರೆ ದಾನಗಳು ಅಲ್ಲಿ ನಡೆಯುತ್ತಿದೆ ಎಂಬುದು ಸರ್ವಜನವಿದಿತ. ಡಾ. ಐತಾಳರ ಗ್ರಂಥದಲ್ಲಿ ಇಂತಹ ದಾನ ಕಾರ್ಯಗಳ ಹಾಗೂ ಅವುಗಳ ವಿಸ್ತೃತ ವಿಶ್ಲೇಷಣೆಗಳೂ ಇವೆ. ಧರ್ಮಸ್ಥಳದ ದಾನ ವೈವಿಧ್ಯ ಮತ್ತು ಪರಂಪರೆಯ ಒಂದು ಗಂಭೀರ ಅಧ್ಯಯನವಾಗಿರುವಂತೆಯೇ ವಿಸ್ತಾರದಲ್ಲಿ ದಾನ -ಅದರ ರೂಪ ವೈವಿಧ್ಯ ಮತ್ತು ಪ್ರಕ್ರಿಯೆಗಳ ಒಂದು ತುಲನಾತ್ಮಕ ವಿಶ್ಲೇಷಣೆಯೂ ಆಗಿದೆ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.