ಕಲಾ ಇತಿಹಾಸದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಚೂಡಾಮಣಿ ನಂದಗೋಪಾಲ್ ಅವರು ಲಂಡನ್ ನ ವಿಕ್ಟೋರಿಯಾ ಆಂಡ್ ಆಲ್ಬರ್ಟ್ ಮ್ಯೂಸಿಯಮ್ ನಲ್ಲಿ ನೆಹರೂ ಫೆಲೋಶಿಪ್ ಪಡೆದ ಮೊದಲಿಗರು. ಪ್ಯಾರಿಸ್ ನ ಯುನೆಸ್ಕೋ ಸಿಲ್ಕ್ ರೋಡ್ ಫೆಲೋಶಿಪ್, ಸಿಡ್ನಿಯ ಯು.ಎನ್. ಎಸ್.ಡಬ್ಲ್ಯು ಸೀನಿಯರ್ ಫೆಲೋಶಿಪ್, ಎರಡು ರಾಷ್ಟ್ರೀಯ ಸಂಶೋಧನಾ ಫೆಲೋಶಿಪ್ ಗಳನ್ನು ಪಡೆದಿದ್ದಾರೆ. ದಕ್ಷಿಣ ಭಾರತದಲ್ಲಿ ಲಲಿತಕಲಾ ಶಿಕ್ಷಣದಲ್ಲಿ ಕಲಾ ಇತಿಹಾಸವನ್ನು ಸ್ಥಾಪಿಸಿದ ಕೀರ್ತಿ ಇವರದ್ದು. ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಇತಿಹಾಸದ ಮೊಟ್ಟಮೊದಲ ಅಧ್ಯಾಪಕಿಯಾಗಿ 18 ವರ್ಷ ಕಾಲ ಕಾರ್ಯ ನಿರ್ವಹಿಸಿದ್ದಾರೆ. 18 ಜನ ಸಂಶೋಧನಾರ್ಥಿಗಳಿಗೆ ಹಾಗೂ 20 ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೂಡಾಮಣಿ ಅವರ 20 ಸಂಶೋಧನಾ ಗ್ರಂಥಗಳು ಹಾಗು 100 ಪ್ರಬಂಧಗಳು ಪ್ರಕಟವಾಗಿವೆ.
ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ಐ.ಜಿ.ಎನ್.ಸಿ.ಎ.ಯ ಶೈಕ್ಷಣಿಕ ವಿಭಾಗ ಮುಖ್ಯಸ್ಥರಾಗಿದ್ದಾರೆ. ಲಲಿತಕಲೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಹಲವು ಸಂಶೋಧನಾ ಯೋಜನೆಗಳಿಗೆ ಮುಂಚೂಣಿಯಲ್ಲಿದ್ದು ಮಾರ್ಗದರ್ಶನ ನೀಡುತ್ತಿದ್ದಾರೆ.
ಕೃತಿಗಳು: ಮಂಜೂಷಾ ಕರಂಡ (ಧರ್ಮಸ್ಥಳದ ಶ್ರೀ ಕ್ಷೇತ್ರದಲ್ಲಿ ಡಾ. ವೀರೇಂದ್ರ ಹೆಗ್ಗಡೆ ಅವರು ಸಂಗಿತ, ಕಲೆ, ಚಿತ್ರಕಲೆ, ಶಿಲ್ಪಕಲೆ ವಲಯಗಳಿಗೆ ನೀಡಿದ ಕೊಡುಗೆಗಳ ಕುರಿತ ಕೃತಿ)