ಡಾ. ಬಿ. ಪಿ. ಸಂಪತ್ ಕುಮಾರ್ ಅವರು ಅವಿಭಜಿತ ದ.ಕ. ಜಿಲ್ಲೆಯ ಅನೇಕ ಸಂಸ್ಥೆಗಳ ಸ್ಮರಣ ಸಂಚಿಕೆಗಳ ಸಂಪಾದಕರಾಗಿ, ವಿಮರ್ಶೆ ಮತ್ತು ಪರಾಮರ್ಶನ ಗ್ರಂಥಗಳಲ್ಲಿ ಸಹಸಂಪಾದಕರಾಗಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿ, ಜೇಸೀ ವಲಯ ತರಬೇತಿದಾರರಾಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿದ್ದು, ರಾಷ್ಟ್ರಮಟ್ಟದ ಶೈಕ್ಷಣಿಕ ಶಿಬಿರಗಳಲ್ಲಿ ತರಬೇತಿ ಪಡೆದವರು, ಅನೇಕ ರಾಷ್ಟ್ರೀಯ ವಿಚಾರ ಸಂಕಿರಣಗಳ ಸಂಘಟಕರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವೀಧರರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. 'ಸಾಂಸ್ಕತಿಕ ಧರ್ಮಸ್ಥಳ' ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಮುಂಬಯಿ ವಿ. ವಿ. ಯಿಂದ ಪಿ.ಹೆಚ್.ಡಿ. ಪಡೆದಿದ್ದಾರೆ.
ಕೃತಿಗಳು: ಡಾ. ವೀರೇಂದ್ರ ಹೆಗ್ಗಡೆಯವರು (ಜೀವನ ಚಿತ್ರ), ಡಾ. ತಾಳ್ತಜೆ ವಸಂತಕುಮಾರ (ಜೀವನ ಚಿತ್ರ), ಕನ್ನಡ ಸಾಹಿತ್ಯ ಪರಂಪರೆ ಮತ್ತುಅಭಿವ್ಯಕ್ತಿ, ಸಾಂಸ್ಕೃತಿಕ ಸವಾಲು, ಮಾನತುಂಗ, ಮಹಾಚೇತನ, ಮಹಾಬಂಧ, ವಜ್ರಕುಸುಮ, ಅಯನ (ಸಂಪಾದನಾ ಗ್ರಂಥ)