‘ಬೆಸ್ಟ್ ಆಫ್ ಕಟ್ಟೆಪುರಾಣ’ ಬಿ. ಚಂದ್ರೇಗೌಡ ಅವರ ಕೃತಿಯಾಗಿದೆ. ಇವರು ಲಂಕೇಶ ಪತ್ರಿಕೆಗೆ ಬರೆದ ಕಟ್ಟೆ ಪುರಾಣ ಅಂಕಣದಿಂದ ಕೆಲವನ್ನು ಆಯ್ದು ಇಲ್ಲಿ ಪ್ರಕಟಿಸಲಾಗಿದೆ. ಕಟ್ಟೆಪುರಾಣವು ಸಹಜ ಗ್ರಾಮೀಣ ಹಾಸ್ಯವಾಗಿದ್ದು, ರಾಜಕೀಯ ವಿಮರ್ಶೆ, ಸಮಾಜ ವಿಮರ್ಶೆ ಇವೆರಡನ್ನು ಒಳಗೊಂಡಿತ್ತು. ಇದು ನಿರುದ್ದಿಶ್ಯ ಹರಟೆಯಲ್ಲ. ಗಾಂಧಿ, ಅಂಬೇಡ್ಕರ್, ಲೋಹಿಯಾ: ಲಂಕೇಶರ ಚಿಂತನೆಗಳನ್ನು ಸಿಕ್ಕಷ್ಟು ಹೀ ಹೀರಿಕೊಂಡು ಹುಟ್ಟಿದ ವಿಮರ್ಶೆ ಇದು. ಗ್ರಾಮೀಣ ಪಾತ್ರಗಳಿಂದ ಚಿಮ್ಮಿದ ಮುಕ್ತ ವೈನೋದಿಕ ವಿಮರ್ಶೆಯ ಅಂಕಣವೊಂದು ಜವಾಬ್ದಾರಿಯುತ, ಆರೋಗ್ಯಕರ ರಾಜಕೀಯ ವಿಮರ್ಶೆಯ ವೇದಿಕೆಯಾದ ಅಚ್ಚರಿ ಇದು. ಚಂದ್ರೇಗೌಡರ 'ಕಟ್ಟೆಪುರಾಣ'ವನ್ನು ಅನುಕರಿಸಿ ಹುಟ್ಟಿದ ಟೆಲಿಹಾಸ್ಯಸರಣಿಗಳು, ಸಿನಿಮಾ ಸಂಭಾಷಣೆಗಳು ನೂರಾರು!
©2025 Book Brahma Private Limited.