‘ಚಾತಕ’ ಜರಗನಹಳ್ಳಿ ಶಿವಶಂಕರ್ ಅವರ ಕರ್ಮವೀರ ವಾರಪತ್ರಿಕಯಲ್ಲಿ ಪ್ರಕಟವಾದ ಅಂಕಣಬರಹಗಳ ಸಂಕಲನವಾಗಿದೆ. ಕೃತಿಯ ಕುರಿತು ಬೆನ್ನುಡಿಯಲ್ಲಿ ಡಾ. ಚೆನ್ನವೀರ ಕಣವಿ ಅವರು ಹೀಗೆ ಬರೆಯುತ್ತಾರೆ; ಮಾತಿನ ಚಮತ್ಕಾರಕ್ಕಿಂತ ಸತ್ಯ-ಸೌಂದರ್ಯದ ಆವಿಷ್ಕಾರವೇ ಕಾವ್ಯದ ಮುಖ್ಯ ಧ್ಯೇಯವಾಗಿರುವುದರಿಂದ ಪ್ರಕೃತಿ ಪರಿಸರದೊಂದಿಗೆ ಜೀವನಾನುಭವದ ಆಳವನ್ನು ಶೋಧಿಸಿ, ವ್ಯಂಗ್ಯ ವಿಡಂಬನೆಗೆ ಅಷ್ಟಾಗಿ ಹಾತೋರೆಯದೆ ಅರ್ಥಗರ್ಭಿತವಾಗಿ ಕಟ್ಟಿಕೊಡುವುದು ಶಿವಶಂಕರ್ ಅವರಿಗೆ ಸಾಧ್ಯವಾಗಿದೆ. ಜೇಡ ತನ್ನ ಒಡಲಿನಿಂದ ನೂಲು ತೆಗೆದು ಕಲಾತ್ಮಕವಾಗಿ ಬಲೆಯನ್ನು ಹೆಣೆಯದಂತೆ ಕೆಲವು ಕಂಗೊಳಿಸಿದರೆ. ಇನ್ನು ಕೆಲವು ಹಕ್ಕಿಗಳು ಗೂಡು ಕಟ್ಟಿ ತತ್ತಿ ಇಟ್ಟು ಮರಿ ಮಾಡಿದಂತೆ ಮನಸ್ಸನ್ನು ಮುದಗೊಳಿಸುತ್ತದೆ. ಎಲ್ಲಿಯೂ ಉಪದೇಶಕ್ಕೆಡೆಗೊಡದೆ, ಅವರಿವರನ್ನು ದ್ವೇಷದಿಂದ ಕಾಣದೆ, ಮುಖ ನೋಡಿ ಮಣೆ ಹಾಕದೆ ವಿಚಾರ ಪ್ರಚೋದನೆಯನ್ನು ಗುರಿಯಾಗಿಟ್ಟುಕೊಂಡ ಒಂದು ಬಗೆಯ ಮುಗ್ಧ ಸ್ನಿಗ್ಧ ಭಾವ ಇಲ್ಲಿಯ ಬರವಣಿಗೆಯ ವೈಶಿಷ್ಟ್ಯವೆನ್ನಬಹುದು.
©2024 Book Brahma Private Limited.