ಗುರುಪ್ರಸಾದ್ ಕಂಟಲಗೆರೆ ಅವರ ಹಾಸ್ಟೆಲ್ ಬದುಕಿನ ಅನುಭವ ಕಥನ ‘ಟ್ರಂಕು ತಟ್ಟೆ’. ಹಾಸ್ಟೆಲ್ ಜೀವನದ ಕುರಿತು ಅವರು ಕೆಂಡಸಂಪಿಗೆ ವೆಬ್ ಪತ್ರಿಕೆಗೆ ಬರೆದ ಅಂಕಣಗಳ ಸಂಕಲನ. ವಿದ್ಯಾರ್ಥಿ ಬದುಕಿನಲ್ಲಿ ಹಾಸ್ಟೆಲ್ ಅನ್ನುವುದು ಸ್ವಯಂ ಅನ್ವೇಷಣೆಯ ಮೊದಲ ಹೆಜ್ಜೆ. ಸಮಾನವಯಸ್ಕರ ಜೊತೆಗೆ ಬದುಕುವ ಅವಕಾಶಗಳು ಸಿಗುವುದರಿಂದ ಅಲ್ಲಿನ ನೋವು-ನಲಿವುಗಳೊಡನೆ ನವಿರು ಭಾವನೆಯೊಂದು ಸೇರಿಕೊಂಡಿರುತ್ತದೆ. ಎಳೆ ವಯಸ್ಸಿನಲ್ಲಿಯೇ ಹಾಸ್ಟೆಲ್ ಬದುಕಿಗೆ ತೆರೆದುಕೊಂಡ ಗುರುಪ್ರಸಾದ್ ಕಂಟಲಗೆರೆ ಬಾಲ್ಯದ ಮುಗ್ಧ ಕಂಗಳಲ್ಲಿ ಒರಟು ಚಿತ್ರಗಳನ್ನು ಕಂಡಿದ್ದಾರೆ. ಆ ನೆನಪುಗಳನ್ನು ಅವರು ಈ ಕೃತಿಯ ಮೂಲಕ ದಾಖಲಿಸಿದ್ದಾರೆ. ಕೃತಿಯ ಕುರಿತು ವಿವರಿಸುತ್ತಾ 'ಇಲ್ಲಿನ ಅನುಭವಗಳು ನನ್ನೊಬ್ಬನವೇ ಅಲ್ಲ. ಇವು ಘಟಿಸುವ ಕಾಲದಲ್ಲಿ ನಾನೂ ಇದ್ದೆ ಎಂಬುದೇ ಸತ್ಯ. ಬರೆದವನು ನಾನಾಗಿರಬಹುದು ಆದರೆ ಇಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಆಯಾ ಸನ್ನಿವೇಷ ಅಥವ ಅನುಭವದ ಮೇಲೆ ತನ್ನದೇ ಆದ ಹಕ್ಕು ಇದ್ದೇ ಇದೆ. ಅದಕ್ಕಾಗಿಯೇ ನಾನು ಈ ಅನುಭವ ಕಥನದ ಪ್ರಕಟಣೆಯ ಹೊಣೆಗಾರಿಕೆಯನ್ನು ನನ್ನ ಗೆಳಯರಿಗೇ ಬಿಟ್ಟುಬಿಟ್ಟೆ' ಎನ್ನುತ್ತಾರೆ ಗುರುಪ್ರಸಾದ್.
©2024 Book Brahma Private Limited.