‘ಹೊಸ ಮುಖ’ ರಾಜು ಅಡಕಳ್ಳಿ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಇದಕ್ಕೆ ವಿಶ್ವೇಶ್ವರ ಭಟ್ ಅವರ ಬೆನ್ನುಡಿ ಬರಹವಿದೆ; ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ದೈನಿಕ 'ಲೋಕಧ್ವನಿ'ಯಲ್ಲಿ, ಮೂಲತಃ ಪತ್ರಕರ್ತರಾಗಿರುವ ರಾಜು ಅಡಕಳ್ಳಿ ಅವರು ಬರೆಯುತ್ತಿರುವ 'ವ್ಯಕ್ತಿ-ಶಕ್ತಿ' ಎಂಬ ಅಂಕಣ ಸಾಕಷ್ಟು ಓದುಗರನ್ನು ಗಳಿಸಿ ಈಗಾಗಲೇ ಜನಪ್ರಿಯವಾಗಿದೆ. ಇದು ಅಸಲಿಗೆ ಉತ್ತರ ಕನ್ನಡ ಜಿಲ್ಲೆಯ ಪಾಧಕರ ಪರಿಚಯ ಕಥನ ಅಡಕಳ್ಳಿಯವರು ಈ ಅಂಕಣಕ್ಕಾಗಿ ಆಯ್ದುಕೊಂಡ ಸಾಧಕರ ಪಟ್ಟಿ ವೈವಿಧ್ಯದ ದೃಷ್ಟಿಯಿಂದ ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು ಸಮಾಜದ ಎಲ್ಲ ರಂಗಗಳನ್ನು ಅವರಿಸಿರುವ ಸಾಧಕರನ್ನು ಹುಡುಕಿ, ಅದರೊಂದಿಗೆ ಸುದೀರ್ಘ ಮಾತಾಡಿ, ಅವರ ಸಾಧನೆಯ ಮಹತ್ವವನ್ನು ಅರ್ಥೈಸಿಕೊಂಡು, ಉತ್ತರ ಕನ್ನಡದ ಪರಿಸರದ ಭಾಷೆಯಲ್ಲಿ, ಸ್ಥಳೀಯ ನುಡಿಗಟ್ಟುಗಳೊಂದಿಗೆ ಅವರನ್ನು ಪರಿಚಯಿಸಿರುವುದು ವಿಶೇಷ. ಹೀಗಾಗಿ ಇದು ಕೇವಲ ವ್ಯಕ್ತಿ-ಪರಿಚಯವಷ್ಟೇ ಅಲ್ಲ. ಒಬ್ಬ ಸಾಧಕನೊಂದಿಗೆ ನಡೆಸಿದ ಅಪ್ತ ಅನುಸಂಧಾನ ಇಲ್ಲಿನ ವ್ಯಕ್ತಿಯ ಪರಿಚಯ ಓದುಗರಿಗೆ ಆರಂಭದಲ್ಲಿ ಇಲ್ಲದಿದ್ದರೂ, ಓದುತ್ತಾ ಹೋದಂತೆ ನಮ್ಮವರು ಎಂದು ಅನಿಸುತ್ತಾ ಹೋಗುತ್ತಾರೆ. ಅವರೊಂದಿಗೆ ಒಂದು ಅವ್ಯಕ್ತ ಒಡನಾಟದ ಅನುಭವ ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಯನ್ನು ಪರಿಚಯಿಸುವಾಗ, ನಿರ್ವಹಿಸಬೇಕಾದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಜತೆಗೆ ಆ ವ್ಯಕ್ತಿಯ ವ್ಯಕ್ತಿತ್ವಕ್ಕೊಂದು ಘನತೆ ತಂದುಕೊಡುವ ಕೆಲಸವನ್ನು ಅಡಕಳ್ಳಿಯವರು ಈ ಕೃತಿಯಲ್ಲಿ ಮಾಡಿರುವುದು ವಿಶೇಷವೆನಿಸುತ್ತದೆ. ಒಂದೇ ಕೃತಿಯಲ್ಲಿ ಅನೇಕರ ಸಾಧನೆಯ ಶಿಖರವೇರಿದ ಅನುಭವ ಓದುಗನಿಗೆ ದಕ್ಕುತ್ತದೆ.
©2025 Book Brahma Private Limited.