`ನಾರಿ ಅಂಕಣ’ ಕೃತಿಯು ಸತ್ಯವತಿ ರಾಮನಾಥ್ ಅವರ ಲೇಖನಸಂಕಲನವಾಗಿದೆ. ಈ ಕೃತಿಯು ಸನಾತನ ಧರ್ಮದಲ್ಲಿ ನಾರಿಯನ್ನೂ ಸೇರಿಸಿಕೊಂಡು ಮನುಷ್ಯಮಾತ್ರನ ಗುರಿಯು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳನ್ನು ಸಾಧಿಸುವುದೇ ಆಗಿದೆ. ವರ್ಣಾಶ್ರಮ ವ್ಯವಸ್ಥೆಯೂ, ಪ್ರವೃತ್ತಿ, ನಿವೃತ್ತಿ ಮಾರ್ಗಗಳ ನಿರೂಪಣೆಯೂ ಈ ಗುರಿಯನ್ನು ಸಾಧಿಸಲೆಂದೇ ಶಾಸ್ತ್ರಗಳಲ್ಲಿ ಮಾಡಲ್ಪಟ್ಟಿವೆ. ಮನುಷ್ಯನು ತನ್ನ ಜೀವನದ ಗುರಿಯನ್ನೂ, ಜೀವನ ಮಾಡುವ ಕ್ರಮವನ್ನೂ, ಮಾಡುವ ಕರ್ಮಗಳನ್ನೂ, ನೀತಿ ನಿಯಮಗಳನ್ನೂ ತಾನೇ ಸ್ವತಂತ್ರವಾಗಿ ಏರ್ಪಡಿಸಿಕೊಳ್ಳಬಹುದಾದರೂ, ಆ ಏರ್ಪಾಡು ಗಳು ಅವನಿಗಿರುವ ಮಿತಿಯಿಂದ ಅವನನ್ನು ಸ್ವಚ್ಛಂದಪ್ರವೃತ್ತಿಗೆ ನೂಕುತ್ತವೆ. ಪುರುಷಾರ್ಥಗಳ ರಹಸ್ಯವನ್ನೂ, ತಾನು ಮಾಡುವ ಪಾಪ ಪುಣ್ಯ ಕಾರ್ಯಗಳ ಫಲವನ್ನೂ ಶಾಸ್ತ್ರಾಧಾರವಿಲ್ಲದೇ ತಾನೇ ತಿಳಿದುಕೊಳ್ಳಲಾರ, ನಿರ್ಧರಿಸಿಕೊಳ್ಳಲಾರ. ಇದಕ್ಕೆ ಕಾರಣ ಕರ್ಮಗಳಿಗೆ ಫಲವು ಪ್ರತ್ಯಕ್ಷ ಅನುಮಾನ ಪ್ರಮಾಣಗಳಿಗೆ ಅಳವಡದ ಅತೀಂದ್ರಿಯ ವಿಷಯವಾಗಿದೆ. ಈ ಲೇಖನಗಳಲ್ಲಿ ತಿಳಿಸಿರುವ ನಾರಿಯ ಪವಿತ್ರ ಮಾತೃತಸ್ಥಾನವೂ, ಪಾತಿವ್ರತ್ಯವೂ, ವಿಧವೆಯ ಜೀವನ ಕ್ರಮವೂ, ಬಹುತೇಕ ಎಲ್ಲಾ ವಿಚಾರಗಳೂ ಸನಾತನಧರ್ಮದ ಬಗ್ಗೆ ವಿರೋಧವಿರುವವರಿಗೆ ಹಿಡಿಸಲಾರದು. ನಾರಿಯನ್ನು ಪುರುಷನ ಸೇವೆಗೂ, ಗುಲಾಮಗಿರಿಗೂ ನೂಕಿ ಕುಟುಂಬದ ಚೌಕಟ್ಟಿನಲ್ಲಿ, ಮನೆಯಲ್ಲಿ ಅವಳನ್ನು ಬಂಧಿಸುವ ತಂತ್ರಗಾರಿಕೆ ಇದು, ಈ ದೇಶದಲ್ಲಿ ಮುಂಚಿನಿಂದಲೂ ಹೀಗೆಯೇ ಬಂದಿದೆ ಎಂದು ಲೇಖಕಿ ತಿಳಿಸಿದ್ದಾರೆ.
©2024 Book Brahma Private Limited.