ಪ್ರಸ್ತುತ ಅವರ ಈ ಕೃತಿ ಸ್ನೇಹಸಂಬಂಧ'ದಲ್ಲಿ ಪ್ರಕಟವಾದ ಸಂಪಾದಕೀಯ ಬರಹಗಳು, ಸಂಪಾದಕೀಯ ಬರಹಗಳ ಶೈಲಿಯೂ ವಿಶಿಷ್ಟವಾದುದು. ಅಲ್ಲಿ ಆಯ್ದುಕೊಂಡ ವಿಷಯಕ್ಕೆ ಚಿಂತನೆಯ ಧ್ವನಿ ಇರದಿದ್ದರೆ ಅದು ಶುಷ್ಕ ಬರಹವಾಗಬಲ್ಲುದು. ವ್ಯಾಪ್ತಿಯಲ್ಲಿ ಪುಟಗಳ ಮಿತಿಯಲ್ಲಿ ಸಮಗ್ರತೆಯತ್ತ ಧ್ವನಿಪೂರ್ಣತೆಯನ್ನು ಸಮ ಧೋರಣೆಯತ್ತ ಒಳಗೊಳ್ಳ ಬೇಕಾಗುತ್ತದೆ. ಒಂದು ಸಂಘದ ಪತ್ರಿಕೆ ಎಂದಾಕ್ಷಣ ಅಲ್ಪನ ಬಿಂಬಿಸುವುದರ ಸಂಪಾದಕೀಯ ಬರಹಗಳಿಗೆ ಮಿತಿಯೂ ಇರುತ್ತದೆ. ಸಮಕಾಲೀನತೆಯನ್ನು ಜತೆಗೆ ಸಾರ್ವಕಾಲಿಕತೆಯನ್ನು ಕೂಡಾ ಒಳಗೊಳ ಬೇಕಾಗುತ್ತದೆ. ಇದು ಇಲ್ಲಿನ ಸಂಪಾದಕೀಯ ಬರಹಗಳಲ್ಲಿ ಜೋಕಟ್ಟೆಯವರಿಗೆ ಸಾಧ್ಯವಾಗಿದೆ. ಇವರ ಸರಳ, ಪ್ರದ್ಯ ಶೈಲಿ ಆಕರ್ಷಕವೂ ಆಗಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಾಮಾಜಿಕ ಚಿಂತನೆ ಹೀಗೆ ಅದರ ವ್ಯಾಪ್ತಿ ವಿಶಾಲವಾದದ್ದು, ಪತ್ರಕರ್ತನಾಗಿದ್ದರಿಂದ ಇವರಿಗೆ ಜೀವನವನ್ನು ಅದರ ಎಲ್ಲ ಕೋನಗಳಲ್ಲಿ ಗ್ರಹಿಸಿ ಸೃಜಿಸುವ ಶಕ್ತಿಯೂ ಇದೆ. ಈ ಎಲ್ಲ ಗುಣಗಳು ಇಲ್ಲಿನ ಸಂಪಾದಕೀಯ ಬರಹಗಳಲ್ಲಿ ಕಾಣಬಹುದು. ಇವರಿಗೆ ಶುಭ ಹಾರೈಕೆಗಳು ಡಾ. ಭರತ್ ಕುಮಾರ್ ಪೊಲಿಪು
©2024 Book Brahma Private Limited.