'ಬೀಚಿ' ಎಂಬುದು ರಾಯಸಂ ಭೀಮಸೇನರಾವ್ ಅವರ ಕಾವ್ಯನಾಮ. ಅವರು ಜನಿಸಿದ್ದು 1913ರ ಏಪ್ರಿಲ್ 23ರಂದು ಬಳ್ಳಾರಿ ಜಿಲ್ಲೆಯ ಹರಪನ ಹಳ್ಳಿಯಲ್ಲಿ. ತಂದೆ ರಾಯಸಂ ಶ್ರೀನಿವಾಸರಾವ್, ತಾಯಿ ಭಾರತಮ್ಮ. 'ಬೀಚಿ' ಯವರ ಹೆಸರಿನ ಹಾಗೆ ಅವರ ಸಹಿಯೂ ವಿಚಿತ್ರ- 'ಬಿ' ಕನ್ನಡವಾದರೆ 'ಚಿ' ಇಂಗ್ಲಿಷು.
ಸತಿ ಸೂಳೆ, ಸರಸ್ವತಿ ಸಂಹಾರ, ಖಾದಿ ಸೀರೆ, ಹೆಂಣು ಕಾಣದ ಗಂಡ, ಸತ್ತವನು ಎದ್ದುಬಂದಾಗ, ಮೇಡಮ್ಮನ ಗಂಡ, ಏರದ ಬಳೆ, ಬಂಗಾರದ ಕತ್ತೆ, ಮೂರು ಹೆಂಣು ಐದು ಜಡೆ, ಸುನಂದೂಗ ಏನಂತೆ, ಲೇವಡಿ ಟೈಪಿಸ್ಟ್, ಆರಿದ ಚಹಾ, ಬಿತ್ತಿದ್ದೇ ಬೇವು, ಕಾಮಂಣ (ಕಾದಂಬರಿಗಳು). ತಿಂಮನ ತಲೆ, ಆರು ಏಳು ಸ್ತ್ರೀ ಸೌಖ್ಯ, ಅಮ್ಮಾವ್ರ ಕಾಲ್ಗುಣ, ಸಾಹುಕಾರ ಸುಬ್ಬಮ್ಮ, ಹೆಂಡತಿ ನಕ್ಕಾಗ, ಮಾತನಾಡುವ ದೇವರುಗಳು, ಗರತಿಯ ಗುಟ್ಟು, ತಿಮ್ಮನ ಶಬ್ದ ಕೋಶ, ತಿಂಮರಸಾಯನ (ಹರಟೆಗಳು)
' ಅಂದನಾ ತಿಂಮ' ನಾಲ್ಕು ಸಾಲಿನ ಸುಮಾರು 500 ಚುಟುಕಗಳ ಸಂಗ್ರಹ.
ಎಸ್.ಎಲ್.ಸಿ.ವರೆಗೆ ಮಾತ್ರ ಓದಿದ್ದ ಈ ಹಾಸ್ಯ ಸಾಹಿತಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು.
ಅವರು 1980ರ ಡಿಸೆಂಬರ್ 7 ರಂದು ನಿಧನರಾದರು.