ಎಂಟು ಗಂಭೀರ ಹರಟೆಗಳನ್ನು ಹೊಂದಿರುವ ಕೃತಿಯಲ್ಲಿ ಹಾಸ್ಯಗಾರ ಬೀchi ಅವರ ದಾರ್ಶನಿಕತೆ ಎದ್ದು ಕಾಣುತ್ತದೆ. ಕಾಮ ಎಂದರೆ ಆಸೆ, ಬಯಕೆ ಎಂಬರ್ಥದಲ್ಲಿ ಚಿತ್ರಿತವಾಗಿದೆ. ಬಯಕೆಗಳ ಲೋಕಕ್ಕೆ ಮನುಷ್ಯ ತೆರಳಿದರೂ ಭೂಲೋಕದ ಬಯಕೆ ಅವನನ್ನು ಬಿಡುವುದಿಲ್ಲ ಎಂಬುದನ್ನು ಮಾರ್ಮಿಕವಾಗಿ ಕೃತಿಕಾರ ಹೇಳಿದ್ದಾರೆ.
'ಕಾಮಲೋಕ' ಪ್ರಕಟಗೊಂಡ ಕೆಲವರ್ಷಗಳ ಬಳಿಕ ತತ್ವಶಾಸ್ತ್ರದ ಬಗೆಗೆ ಲೇಖಕರಿಗೆ ಆಕರ್ಷಣೆ ಕಡಿಮೆ ಆಯಿತು. ಅದಕ್ಕಾಗಿಯೇ ಈ ಕೃತಿಯ ಎರಡನೇ ಆವೃತ್ತಿ ಬರಬಾರದು ಎಂದು ಪ್ರಕಾಶಕರಿಗೆ ಸೂಚಿಸಿದ್ದಾಗಿ ಬೀchi ತಮ್ಮ ಆತ್ಮಕತೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೂ ಕೃತಿ ಮತ್ತೆ ಮುದ್ರಣಗಳನ್ನು ಕಂಡಿದ್ದು ಅದರ ಜನಪ್ರಿಯತೆಗೆ ಸಾಕ್ಷಿ. ಪುಸ್ತಕ ಬರುವುದಕ್ಕೂ ಮುನ್ನ 'ಪ್ರಜಾವಾಣಿ' ಮತ್ತು 'ಸುಧಾ'ದಲ್ಲಿ ಈ ಹರಟೆಗಳು ಪ್ರಕಟಗೊಂಡಿದ್ದವು.
©2024 Book Brahma Private Limited.