‘ವಿನಾಯಕ ಕೃಷ್ಣ ಗೋಕಾಕ’ ಸುರೇಂದ್ರನಾಥ ಮಿಣಜಗಿ ಅವರ ಇಂಗ್ಲಿಷ್ ಕೃತಿಯನ್ನು ಲೇಖಕ ಮಾಧವ ಕುಲಕರ್ಣಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ವಿ.ಕೃ.ಗೋಕಾಕರ ಬದುಕು ಮತ್ತು ಬರಹಗಳ ಮೇಲೆ ಬೆಳಕು ಚೆಲ್ಲುವ ಕೃತಿ ಇದು. ಮೂಲ ಕೃತಿಯ ಲೇಖಕ ಸುರೇಂದ್ರನಾಥ ಮಿಣಜಗಿ ಅವರು ಗೋಕಾಕರ ಶಿಷ್ಯರೂ ಹೌದು. ಆಕ್ಸ್ ಫರ್ಡ್ ವಿದ್ವಾಂಸ: ಜೀವನ ಚರಿತ್ರೆಯ ರೂಪರೇಷೆ, ಕನಸುಗಾರ ಕವಿ: ಪ್ರಾರಂಭಿಕ ಕವನಗಳು, ಸಮನ್ವಯ ದೃಷ್ಟಿ, ಆಧುನಿಕತೆ ಅಥವ ನವ್ಯತೆಯ ಘಟ್ಟ: ನಂತರದ ಕವನಗಳು, ಮಹಾ ಸಾಧನೆ: ಭಾರತ ಸಿಂಧು ರಶ್ಮಿ ಮಹಾಕಾವ್ಯ, ಸಮರಸವೇ ಜೀವನ ಕಾದಂಬರಿ, ಮತ್ತು ಇತರ ಬರಹಗಳು ಹಾಗೂ ಗೋಕಾಕರ ಕೃತಿಗಳು ಎಂಬ 6 ಅಧ್ಯಾಯಗಳನ್ನು ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.