ಖಲೀಲ್ ಗಿಬ್ರಾನ್ ಪ್ರವಾದಿ ಕೃತಿಯು ಬಂಜಗೆರೆ ಜಯಪ್ರಕಾಶ ಅವರ ಅನುವಾದಿತ ಕೃತಿಯಾಗಿದೆ. ಮುರಿದ ರೆಕ್ಕೆಗಳ ದೇವತೆ 'ಈ ಲೋಕಕ್ಕೆ ಬರುವ ಮುಂಚೆಯೇ, ನನ್ನ ತಾಯಿಯಾಗಿ ನಿನ್ನ ಆಯ್ಕೆ ಮಾಡಿಕೊಂಡಿದ್ದನಾ ಅಮ್ಮಾ?' 'ಈ ಲೋಕಕ್ಕೆ ಬರದಿದ್ದರೆ ನೀನು ದೇವತೆಯಾಗಿಯೇ ಇದ್ದು ಬಿಡುತ್ತಿದ್ದೆ ಕಂದಾ ನಾನು ಈಗಲೂ ದೇವತೆ' ನಾನು ಹೇಳಿದೆ 'ಆದರೆ ನಿನ್ನ ರೆಕ್ಕೆಗಳಲ್ಲಿ ಮಗು ?' ಅವಳ ತೋಳುಗಳನ್ನು ನನ್ನ ಭುಜದ ಮೇಲಿರಿಸಿಕೊಂಡು ಹೇಳಿದೆ, ಇವೇ ನನ್ನ ರೆಕ್ಕೆಗಳು 'ಆದರೆ ಅವು, ಮುರಿದ ರೆಕ್ಕೆಗಳು ತನ್ನ ಗೆಳತಿ ಮೇಜಿಯಾದೆಗೆ ಬರೆದ ಪತ್ರದಲ್ಲಿ, 'ನನ್ನ ಅಮ್ಮನೀಲಿ ದಿಂಗತಗಳಾಚೆಗೆ ಹೊರಟು ಹೋಗಿದ್ದಾಳೆ. ಆದರೆ ಅವಳ ಹೃದಯದಿಂದ ಬಂದ ಶಬ್ದ “ಮುರಿದೆ ರೆಕ್ಕೆಗಳು", ನನ್ನ ಮನಸ್ಸಿನಲ್ಲಿ ಉಳಿದು ಹೋಗಿದೆ. ನಿನಗೆ ಕಳಿಸುತ್ತಿರುವ ಈ ಕಥೆಗೆ 'ಮುರಿದ ರೆಕ್ಕೆಗಳ ಗಿಬ್ರಾನ್‌ನ ತಾಯಿ ಕಮಿಲ, ಕಮಿಲಾಳ ತಂದೆ ಸ್ಟೀಫನ್ ಅಹಿಮ್ ಒಬ್ಬ ಮೆರೋನೈಟ್ ಕ್ರೈಸ್ತ ಪಂಗಡದ ಯಾಜಕ. (ಮೆರೊನೈಟ್ ಕ್ರೈಸ್ತ ಯಾಜಕರು ಮದುವೆ ಮಾಡಿಕೊಳ್ಳಬಹುದು) ಮದುವೆಯಾದ ನಂತರ ಕಮಿಲಾ, ಗಂಡನೊಂದಿಗೆ ದಕ್ಷಿಣ ಅಮೇರಿಕಾದ ಬ್ರೇಜಿಲ್ ದೇಶದಲ್ಲಿ ನೆಲೆಸಿದಳು. ಮೊದಲ ಮಗು ಪೀಟರ್ ಹುಟ್ಟಿದ ನಂತರ ಗಂಡ ತೀರಿಕೊಂಡ, ಕಮಿಲಾ ತನ್ನ ಮಗ ಪೀಟರ್‌ನನ್ನು ಕರೆದುಕೊಂಡು ತಂದೆಯ ಮನೆಗೆ ವಾಪಸ್ಸಾದಳು. ಒಂದು ದಿನ ಕಮಿಲಾ ತನ್ನ ತಂದೆಯ ತೋಟದಲ್ಲಿ ಹಾಡುತ್ತಾ ಕುಳಿತಿದ್ದಳು. ಗಿಬ್ರಾನ್‌ನ ತಂದೆಯಾಗಲಿದ್ದ ಮನುಷ್ಯನಿಗೆ ಕಮಿಲಾಳ ಹಾಡು ಕೇಳಿಸಿತು ಹೀಗೆ ಈ ಕತೆಯು ಪ್ರಾರಂಭವಾಗುತ್ತದೆ.
©2024 Book Brahma Private Limited.