ಸಿಕಂದರ್ ಎಂಬ ಅಪರೂಪದ ಯೋಧ 

Author : ಮಾಲತಿ ಮುದಕವಿ

Pages 248

₹ 250.00




Published by: ಶೀತಲ ಮೆಹ್ತಾ
Address: ಅಜಬ್ ಪಬ್ಲಿಕೇಷನ್ಸ್, 709/2, ಶ್ರೀ ಚೇಂಬರ್‍ಸ್, ಯೂನಿಯನ್ ಬ್ಯಾಂಕ್ ಎದುರು, ಅಶೋಕನಗರ, ನಿಪ್ಪಾಣಿ-581237
Phone: 9689890420

Synopsys

ಇಂದ್ರಾಯಣೀ ಸಾವಕಾರ ಅವರು ಸಿಕಂದರ್ ಎಂಬ ಅಪರೂಪದ ಯೋಧ - ಈ ಕೃತಿಯನ್ನು ಲೇಖಕಿ ಮಾಲತಿ ಮುದಕವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೆಸಿಡೋನಿಯಾ, ಪ್ರಾಚೀನ ಗ್ರೀಸದ ಒಂದು ಪ್ರಾಂತ, ಎರಡು ಮಹಾಸಾಗರಗಳು ಒಂದನ್ನೊಂದು ಸಮಾವೇಶಗೊಂಡಿರುವಂಥ ಸ್ಥಳ. ಗ್ರೀಸ್ ಅಂಥದೇನೂ ಬಹಳ ದೊಡ್ಡದಲ್ಲ. ಅದರದೇ ಮೂರನೇ ಒಂದು ಭಾಗದ ತುಂಡು. ಆದರೆ ನಿಸರ್ಗವು ಇಲ್ಲಿ ತನ್ನ ಸರ್ವ ಸೌಂದರ್ಯವನ್ನು ಕುಟ್ಟಿ ಕುಟ್ಟಿ ತುಂಬಿದಂತಿದೆ. ಈ ರೂಪಗಳ ಹೊಡೆತವನ್ನು ಸಹಿಸಿಕೊಂಡು ಇಲ್ಲಿ ಜೀವಿಸುವುದು ಅತ್ಯಂತ ಕಷ್ಟವೇ, ಅಷ್ಟೇ ಏಕೆ ಅಶಕ್ಯವೂ ಕೂಡಾ. ಅಂತಲೇ ಇಲ್ಲಿ ಹುಟ್ಟಿದವರೆಲ್ಲರೂ, ಅಲ್ಲಿಯೇ ವಾಸಿಸಿದರು, ಬೆಳೆದರು. ಅವರೆಲ್ಲರೂ ಒಂದೇ ಮಂತ್ರವನ್ನು ಸಾಕ್ಷಾತ್ಕರಿಸಿಕೊಂಡರು. – ಅತ್ಯಂತ ಶ್ರಮ, ಅತ್ಯಂತ ಶೌರ್ಯ, ಹಾಗೂ ಜೊತೆಗೇ ಪ್ರಚಂಡ ಹೋರಾಟ. ಗ್ರೀಕರೂ ಸ್ಪರ್ಧೆಗಳನ್ನು ಗೆಲ್ಲಲೆಂದು ಕುದುರೆಗಳನ್ನು ತರಬೇತಿ ಕೊಟ್ಟು ಸಿದ್ಧಪಡಿಸುತ್ತಿದ್ದರು. ಚುರುಕಾದ ಆ ಕುದುರೆಗಳು ಓಡುತ್ತ, ಧಾವಿಸುತ್ತಿರುವಾಗ ಅವನ್ನೂ ಕೂಡ ವೇಗದಿಂದ ಓಡಿಸುತ್ತಿದ್ದರು. ಫಿಲಿಪ್ ಅವರನ್ನೂ ಚೇಷ್ಟೆ ಮಾಡುತ್ತಿದ್ದನು. “ಷರತ್ತು ಗೆದೆಯಲಿಕ್ಕಾಗಿ ನನಗೆ ಕುದುರೆಗಳು ಬೇಕಿಲ್ಲ, ಯುದ್ಧಗಳನ್ನು ಗೆಲ್ಲಲಿಕ್ಕಾಗಿ ಬೇಕಾಗುತ್ತವೆ” ಎಂದು ಫಿಲಿಪ್ ತಿರಸ್ಕಾರದಿಂದ ಹೇಳುತ್ತಿದ್ದನು. ಗ್ರೀಸ್‍ನಲ್ಲಿಯ ಅನೇಕ ರಾಜ್ಯಗಳನ್ನು ಗೆಲ್ಲುವಂಥ ಮಹತ್ವಾಕಾಂಕ್ಷೆಯನ್ನು ಫಿಲಿಪ್ ಹೊಂದಿದ್ದ. ಈ ಕುದುರೆಗಳಲ್ಲಿ ಇದ್ದಂಥ ಗುಣಗಳೇ ಫಿಲಿಪ್‍ನ ಸೈನಿಕರಲ್ಲೂ ಇದ್ದವು. ಈ ಮೆಸಿಡೋನಿಯನ್ ಸೈನಿಕರೊಂದಿಗೆ ಯುದ್ಧಕ್ಕೆ ಹೋದರೂ ಫಿಲಿಪ್ ಎಂದೂ ರಣರಂಗಕ್ಕೆ ಹೋಗುತ್ತಿರಲಿಲ್ಲ. ಒಂದು ಭೀಕರ ಬಿರುಗಾಳಿಯಲ್ಲಿಯೇ ಫಿಲಿಪ್‍ನ ಪತ್ನಿಯಾದ ಒಲಿಂಪಿಯಾಸ್ ಪೆಲ್ಲಾ ನಗರದಲ್ಲಿಯ ಅವನ ಅರಮನೆಯಲ್ಲಿ ಒಬ್ಬ ಪುತ್ರನಿಗೆ ಜನ್ಮವಿತ್ತಳು. ಅವನ ಮೊದಲ ಪುತ್ರ! ಉತ್ತರಾಧಿಕಾರಿ! ಆದರೆ ಶಿಸ್ತನ್ನು ಅನುಸರಿಸುವಂಥ ಅವನಿಗೆ ಈ ಘಟನೆಯು ನಿಯೋಜಿತ ಕಾರ್ಯವನ್ನು ನಿಲ್ಲಿಸುವಂಥದಾಗಿರಲಿಲ್ಲ. ಬೆಳಿಗ್ಗೆಯೇ ಫಿಲಿಪ್ ತನ್ನ ಸೈನ್ಯದೊಂದಿಗೆ ಹೊರಟನು. ಏಶಿಯನ್ ಸಮುದ್ರದ ದಂಡೆಯ ಮೇಲಿನ ಪೋಟಿಡಾಯಿಯಾ ಬಂದರಿನ ಕಡೆಗೆ ಅಂದರೆ ರಾಜ್ಯದ ಕಡೆಗೆ ಅವನು ತನ್ನ ಸೈನ್ಯವನ್ನು ಹೊರಳಿಸಿದನು. ಬಿರುಗಾಳಿಯಲ್ಲಿ ತಮ್ಮ ಮೇಲೆ ಯಾರಾದರೂ ದಾಳಿ ಮಾಡಬಹುದೆಂಬ ಕಲ್ಪನೆಯೂ ಆ ಜನರ ಮನಸ್ಸಿಗೆ ತಟ್ಟಿರಲಿಲ್ಲ. ಅವರ ಸೈನಿಕರು, ಅಂದರೆ ಊರೊಳಗಿನ ಎಲ್ಲ ಧೈರ್ಯಶಾಲಿ ಪುರುಷರು ಮೈಮರೆತಿದ್ದರು. ಇಂಥದರಲ್ಲಿ ದಾಳಿ ಮಾಡುವವ ಫಿಲಿಪ್‍ನೇ ಎನ್ನುವುದನ್ನು ತಿಳಿದ ಅವರ ಜೀವ ಕುತ್ತಿಗೆಗೆ ಬಂತು. ಫಿಲಿಪ್‍ನಿಗೆ ಅವರು ಸಾಕಷ್ಟು ದೋಚಲು ಬಿಟ್ಟರು ಹಾಗೂ ತಮ್ಮ ಸ್ವ ಇಚ್ಛೆಯಿಂದ ಅವನ ಮಾಂಡಲಿಕತ್ವವನ್ನು ಸ್ವೀಕರಿಸಿದರು. ‘ಗ್ರೀಸಿನ ಭಾವೀ ವಿಜೇತ’ ಎಂದು ಫಿಲಿಪ್‍ನ ಖ್ಯಾತಿ ಇತ್ತು. ಯುದ್ಧವೆಂದರೆ ಹಿಂಸೆಯನ್ನೇ ಮಾಡದೆ ಸಿಗುವ ವಿಜಯವು ವಿಶೇಷವಾಗಿ ಪ್ರಿಯವಾಗಿತ್ತು. ಇಂತಹ ಕಥಾಹಂದರ ಈ ಅನುವಾದವು ಓದುಗರನ್ನು ಸೆಳೆಯುತ್ತದೆ. 

About the Author

ಮಾಲತಿ ಮುದಕವಿ
(10 April 1950)

ಲೇಖಕಿ ಮಾಲತಿ ಮುದಕವಿ ಅವರು ಎಂ ಎ., ಬಿ ಎಡ್ ಪದವೀಧರರು. ನಿವೃತ್ತ ಕನ್ನಡ ಉಪನ್ಯಾಸಕಿ. ಕರ್ನಾಟಕ ರಾಜ್ಯ ಮಟ್ಟದ ‘ನಗೆಮುಗುಳು’ ಏರ್ಪಡಿಸಿದ್ದ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ಹಾಗೂ ಮುಂಬೈ ಕನ್ನಡಿಗರ ಹಾಸ್ಯ ಲೇಖನ ಸ್ಪರ್ಧೆಯಲ್ಲಿಯೂ ಪ್ರಥಮ ಬಹುಮಾನ. ಸುಧಾ ಯುಗಾದಿ 2016ರ ಹಾಸ್ಯ ಲೇಖನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ. ಆಕಾಶವಾಣಿಯಲ್ಲಿ ಕೂಡ ಅನೇಕ ಚರ್ಚೆಗಳು, ನಾಟಕ ರಚನೆ, ವಿಮರ್ಶೆ, ಪ್ರಬಂಧ ವಾಚನ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವಿಕೆ.  ಶ್ರೀ ಬಸವರಾಜ ಕಟ್ಟಿಮನಿಯವರ ಶತಮಾನೋತ್ಸವದ ಪ್ರಯುಕ್ತ 'ಸಾಹಿತ್ಯಶ್ರೀ' ಎಂಬ ಪುರಸ್ಕಾರ. ಲೇಖಿಕಾ ಸಾಹಿತ್ಯ ವೇದಿಕೆಯ 2020ರ ಎರಡು ರಾಜ್ಯ ಮಟ್ಟದ ಸ್ಪರ್ಧೆಗಳಾದ ...

READ MORE

Related Books