ಬಿ. ಸುಜ್ಞಾನಮೂರ್ತಿ ಅವರ ಅನುವಾದಿತ ಕೃತಿ ಬೌದ್ಧ ದಲಿತ ಹೋರಾಟಗಾರ ಅಯೋತಿದಾಸ್. ಇಂಗ್ಲಿಷ್ ನಲ್ಲಿ ಲೇಖಕರಾದ ಜಿ. ಎಲೋಶಿಯಸ್, ವಿ.ಗೀತ, ಎಸ್ ಬಿ ರಾಜದುರೈ ಅವರು ಬರೆದಿರುವ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ದಲಿತ ಇತಿಹಾಸ ಮತ್ತು ಬೌದ್ಧ ಧಮ್ಮದ ಇತಿಹಾಸ ಎರಡು ಭಿನ್ನ ನೆಲೆಗಳು ಅಲ್ಲ. ಬೌದ್ಧ ಧರ್ಮವೇ ದಲಿತರ ಮೂಲ. ಬೌದ್ಧ ಧರ್ಮದ ಅವನತಿಯೇ ದಲಿತರ ಹೀನಸ್ಥಿತಿಗೆ ಕಾರಣವಾಗಿದೆ. ಅದ್ದರಿಂದಲೇ ಅಯೋತಿದಾಸ್ ರು ದಲಿತರು ಮತ್ತು ಬೌದ್ಧ ಧರ್ಮದ ಪುನರುತ್ಥಾನವನ್ನು ಒಂದೇ ಆಗಿ ನೋಡಿದರು. ಅವರು ಬೌದ್ಧ ಧಮ್ಮ ಸ್ವೀಕರಿಸಿದ 58 ವರ್ಷಗಳ ನಂತರ ಬಾಬಾಸಾಹೇಬ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಆದರು. ಇಂತಹ ಅನೇಕ ಮಾಹಿತಿಗಳು ಈ ಕೃತಿಯಲ್ಲಿ ಲಭ್ಯವಿದೆ.
©2025 Book Brahma Private Limited.