‘ಸಾವರ್ಕರ್’ ಹಿಂದುತ್ವದ ಜನಕನ ನಿಜಕತೆ- ವೈಭವ್ ಪುರಂದರೆ ಅವರ ಇಂಗ್ಲಿಷ್ ಕೃತಿಯನ್ನು ಲೇಖಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಕನ್ನಡೀಕರಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಇರುವ ಸಾವಿರಾರು ಚಿತ್ತಾಕರ್ಷಕ ವ್ಯಕ್ತಿಗಳಲ್ಲಿ ನಾಯಕ ದಾಮೋದರ ಸಾವರ್ಕರ್ ಕೂಡ ಒಬ್ಬರು. ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯ ಪ್ರಬಲ ಪ್ರತಿಪಾದಕರಾಗಿದ್ದು, ಬಳಿಕ ಹಿಂದುತ್ವದ ಅಧ್ವರ್ಯುವಾದರು. ಸಾವರ್ಕರ್ ತಮ್ಮ ಮಾತೃಭಾಷೆಯಾದ ಮರಾಠಿಯಲ್ಲಿ ಎಂಟು ಸಂಪುಟಗಳನ್ನು ಅಗಾಧ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. ಆದರೆ ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಬಂದಿರುವ ಈವರೆಗಿನ ಯಾವೊಂದು ಕೃತಿಯೂ ಈ ಸಾಹಿತ್ಯ ರಾಶಿಯನ್ನು ಗಮನಿಸಲಿಲ್ಲ. ಹೀಗೆ ಅಜ್ಞಾತವಾಗಿದ್ದ ಮರಾಠಿ ಪತ್ರಿಕೆಗಳು, ಸಾವರ್ಕರ್ ಅವರ ಅನೇಕ ಸಮಕಾಲೀನ ಬರಹಗಳು, ನ್ಯಾಯಾಲಯ ಮತ್ತು ಸರಕಾರಿ ದಾಖಲಾತಿಗಳು, ಧ್ವನಿಮುದ್ರಣಗಳು ಇತ್ಯಾದಿ ಕೂಲಂಕುಷವಾಗಿ ಅಧ್ಯಯನ ಮಾಡಿದ ವೈಭವ್ ಪುರಂದರೆ, ಸಾವರ್ಕರ್ ಜೀವನಚರಿತ್ರೆಯನ್ನು ರಚಿಸಿದ್ದಾರೆ. ಸಾವರ್ಕರ್ ಅವರಿಗೆ ಸಂಬಂಧಿಸಿದಂತೆ ಹೊಸ ಹೊಸ ಸಂಗತಿಗಳನ್ನು ಬೆಳಕಿಗೆ ತಂದಿರುವುದು ಈ ಕೃತಿಯ ಹೆಗ್ಗಳಿಕೆ.
©2024 Book Brahma Private Limited.