ಕ್ರಿ. ಪೂ. 304 ರಿಂದ ಕ್ರಿ.. ಪೂ. 232 ವರೆಗೆ, 72 ವರ್ಷಗಳಷ್ಟು ಬಾಳಿದ ಅಶೋಕನು ‘ಅಶೋಕ ದಿ ಗ್ರೇಟ್’ ಎಂದೇ ಎಲ್ಲರಿಗೂ ಪರಿಚಿತ. ಐತಿಹಾಸಿಕ ಈ ಅರಸನ ಕುರಿತು ಮಂಜುಷಾ ಮುಳೆ ಅವರು ಬರೆದ ಜೀವನ ಚಿತ್ರದ ಕೃತಿಯನ್ನು ಲೇಖಕಿ ಮಾಲತಿ ಮುದಕವಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತದಲ್ಲಿ ಆಗಿಹೋದ ಅತ್ಯಂತ ಮಹತ್ವಪೂರ್ಣ ರಾಜನೆಂದೇ ಹೆಸರಾದ ಅಶೋಕನು ಅನೇಕ ಯುದ್ಧಗಳನ್ನು ಗೆದ್ದು, ತನ್ನ ಸ್ವಾಧೀನ ಪಡಿಸಿಕೊಂಡಿದ್ದನು. ಅವನ ಸಾಮ್ರಾಜ್ಯವು ಈಗಿನ ಪಾಕಿಸ್ತಾನ, ಆಫ್ಘಾನಿಸ್ತಾನ, ಪೂರ್ವ ಬಾಂಗ್ಲಾದೇಶ ಮತ್ತು ಆಸಾಂ, ದಕ್ಷಿಣದ ಕೇರಳ ಹಾಗೂ ಆಂಧ್ರ ಪ್ರದೇಶಗಳವರೆಗೆ ಹಬ್ಬಿತ್ತು. ಭಗವಾನ್ ಬುದ್ಧನ ಜೀವನದಲ್ಲಿ ಯಾವ ಯಾವ ಸ್ಥಳಗಳಲ್ಲಿ ಮಹತ್ವಪೂರ್ಣ ಘಟನೆಗಳು ಘಟಿಸಿದ್ದವೋ ಅಲ್ಲಲ್ಲಿ ಅವನು ಸ್ಮಾರಕಗಳನ್ನು ನಿರ್ಮಿಸಿದನು. ಅಶೋಕನು ಅಹಿಂಸೆ, ಪ್ರೇಮ, ಸಹನೆ ಮುಂತಾದ ಗುಣಗಳ ಆರಾಧಕನಾಗಿದ್ದನು.
ಅಷ್ಟೇ ಅಲ್ಲ, ಶಾಕಾಹಾರೀ ಪದ್ಧತಿಯಲ್ಲಿಯೇ ವಿಶ್ವಾಸವುಳ್ಳವನಾಗಿದ್ದನು. ಅಲ್ಲದೆ ತನ್ನ ಉಳಿದ ಜೀವನವನ್ನೆಲ್ಲ ಅವನು ಇದೇ ತತ್ವಗಳ ಪ್ರಚಾರಕ್ಕಾಗಿ ಸವೆಸಿದನು. ‘ಚಕ್ರವರ್ತಿಗಳ ಚಕ್ರವರ್ತಿ’ ಎಂದು ಅವನು ಇತಿಹಾಸದಲ್ಲಿ ಸುಪ್ರಸಿದ್ಧ. ಅಶೋಕನ ಶಾಸನಗಳೊಂದಿಗೇ ಅವನ ದಂತಕಥೆಗಳು ಎರಡನೆಯ ಶತಮಾನದ ಅಶೋಕವದನ (ಅಶೋಕನ ವರ್ಣನಾತ್ಮಕ ಗ್ರಂಥ) ಮತ್ತು ದಿವ್ಯವದನ (ದೈವೀ ವರ್ಣನೆ) ಕೂಡಾ ಇವೆ. ಈ ರೀತಿಯಲ್ಲಿ ವಿವಿಧ ಗ್ರಂಥಗಳಿಂದಾಗಿ ಜಗತ್ತಿನಾದ್ಯಂತ ತಲುಪಿವೆ. ಈ ಕುರಿತು ಮಹತ್ವದ ಮಾಹಿತಿ ಇಲ್ಲಿ ಕಾಣಬಹುದು.
©2024 Book Brahma Private Limited.