‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ, ಇಲ್ಲಿಯ ಬರಹಗಳು ತುಂಬಾ ಆತ್ಮೀಯವಾಗಿವೆ. ನಡೆಯಲ್ಲಿ ಮಾದರಿಯಾಗಿವೆ. ಕಲಾಮ್ ಅವರು ತಮ್ಮ ನಡೆ ನುಡಿ ಹಾಗೂ ಸರಳ ವ್ಯಕ್ತಿತ್ವದಿಂದ ಭಾರತ ಕಂಡ ಅಪರೂಪದ ರಾಷ್ಟ್ರಪತಿ ಎಂದು ಕರೆಸಿಕೊಂಡವರು. ಇವರು ಕೇವಲ ಒಬ್ಬ ವಿಜ್ಞಾನಿ ಮಾತ್ರವಲ್ಲ. ಒಬ್ಬ ಅತ್ಯುತ್ತಮ ಕೇಳುಗ ಮತ್ತು ಹೊಸ ಬಗೆಯ ಸಂವಹನಗಳ ಸಂಶೋಧಕರು ಹೌದು. ಆಧ್ಯಾತ್ಮಿಕ ಮೌಲ್ಯಗಳಿಗೆ ಅವರು ಕೊಡುತ್ತಿದ್ದ ಕ್ರಿಯಾಶೀಲ ಮತ್ತು ಹೊಸ ಬಗೆಯ ಒತ್ತು ಭಾರತದ ನಾಗರಿಕರ ಪಾಲಿಗೆ ನಿಜಕ್ಕೂ ಭರವಸೆಯ ಕಿರಣವಾಗಿದೆ. ತಮ್ಮ ಅಪಾರ ವೈಜ್ಞಾನಿಕ ಸಾಧನೆಯ ಹಿನ್ನೆಲೆಯಲ್ಲಿ ಮಾನವೀಯತೆಯನ್ನು ಎರಕ ಹೊಯ್ದಂತಹ ಕಲಾಮ್, ಭಾರತೀಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಲೇಖಕ ಇಲ್ಲಿ ವಿಶ್ಲೇಷಿಸಿದ್ದಾರೆ. ಈ ಕೃತಿಯು ಕಲಾಮ್ ವ್ಯಕ್ತಿತ್ವ ಕುರಿತ ಚಿತ್ರಣಗಳಿಂದ ತುಂಬಿರುವ ನೆನಪುಗಳ ಮೆರವಣಿಗೆಯಂತಿದೆ.
©2024 Book Brahma Private Limited.