ಇದು, 15 ಗಾಂಧಿ ಅನುಯಾಯಿಗಳ ಕಿರು ಜೀವನ ಪರಿಚಯ. ತಮಿಳಿನಲ್ಲಿ ಪಾವಣ್ಣನ್.ಬರೆದಿರುವ ಈ ಕೃತಿಯನ್ನು ಕನ್ನಡಕ್ಕೆ ತಂದಿರುವವರು ಕೆ ನಲ್ಲತಂಬಿ. ಗಾಂಧಿ ಸಂಪರ್ಕಕ್ಕೆ ಬಂದ ಅನೇಕ ಹಿರಿಜೀವಿಗಳಲ್ಲಿ ಕೆಲವರನ್ನು ಈ ತಲೆಮಾರಿಗೆ ಪರಿಚಯಿಸುವ ಒಂದು ಅಪರೂಪದ ಪ್ರಯತ್ನ ಇದಾಗಿದೆ. ‘ಇಲ್ಲಿ ಯಾವುದೇ ಅನಗತ್ಯ ಹೊಗಳಿಕೆಯಾಗಲೀ’ಉತ್ಪ್ರೇಕ್ಷಿತ ವರ್‍ಣನೆಯಾಗಲೀ ಇಲ್ಲ. ಬದಲಿಗೆ ನಿಜವಾದ ಕೃತಜ್ಞತೆ ಇದೆ. ಇವರು ಬದುಕಿದ ರೀತಿಯ ಬಗ್ಗೆ, ಅದರ ಘನತೆಯ ಬಗ್ಗೆ ಮೆಚ್ಚುಗೆ ಇದೆ. ಹೀಗಾಗಿ ಈ ಮಹನೀಯರು ನಡೆಸಿದ ಹೋರಾಟದ ಕಥನಕ್ಕೆ ಸದ್ಯದ ತುರ್‍ತನ್ನು ಧ್ವನಿಸಬಲ್ಲ ಶಕ್ತಿ ತಾನಾಗೇ ಒದಗಿಬಂದಿದೆ. ಇಗೋ, ಇವರೆಲ್ಲರೂ ಹೀಗೆ ಬದುಕಿದ್ದರು ಮತ್ತು ಬದುಕಬಹುದೆಂದು ತೋರಿಸಿಕೊಟ್ಟವರು. ಮಿಕ್ಕಂತೆ ನಿಮ್ಮ ಬದುಕನ್ನು ನೀವೇ ರೂಪಿಸಿಕೊಳ್ಳಿ ಎನ್ನುತ್‌ತಾರೆ ಪಾವಣ್ನನ್’ ಎಂದು ಪುಸ್ತಕಕ್ಕೆ ಬರೆದ ಬೆನ್ನುಡಿಯಲ್ಲಿ ವಿ ಎಸ್ ಶ್ರೀಧರ ಹೇಳಿದ್ದಾರೆ.
©2024 Book Brahma Private Limited.