ರಾಜಕೀಯ ಮುತ್ಸದ್ಧಿ ಡಾ. ರಾಮ ಮನೋಹರ ಲೋಹಿಯಾ ಅವರು ಕಂಡಂತೆ ಎಂಬ ಉಪಶೀರ್ಷಿಕೆಯಡಿ ಲೇಖಕ ಬಿ.ಎ.. ಸನದಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಮಹಾತ್ಮಗಾಂಧಿ. ರಾಮ ಮನೋಹರ ಲೋಹಿಯಾ ಅವರು ಭಾರತ ಕಂಡ ಅದ್ವಿತೀಯ ಮುತ್ಸದ್ಧಿ. ಅವರ ರಾಜಕೀಯ ಚಿಂತನೆಗಳ ತೀಕ್ಷ್ಣತೆ ಮಾತ್ರವಲ್ಲ; ಅವುಗಳ ಸಾಮಾಜಿಕ ಮಹತ್ವ ಹಾಗೂ ಭಾರತದ ವಿಕಾಸದಲ್ಲಿಯ ಅಗತ್ಯಗಳು ಕುರಿತಂತೆ ಹೆಚ್ಚಿನ ಮಹತ್ವದ ವಿಷಯಗಳನ್ನು ಒಳಗೊಂಡಿದೆ. ಭಾರತದ ಸಾಮರಸ್ಯವನ್ನು, ಸಂಸ್ಕೃತಿಯನ್ನು ಕುರಿತು ಹೊಸ ನಿಟ್ಟಿನಲ್ಲಿ ವ್ಯಾಖ್ಯಾನಿಸಿದ ಚಿಂತನೆಗಳು ಬಹುತೇಕ ಸಮಾಜವಾದಿಗಳನ್ನು ರೂಪಿಸಿದ್ದರಲ್ಲಿ ಪ್ರಮುಖವಾದವು. ಇಂತಹ ಮುತ್ಸದ್ಧಿಯು ಮಹಾತ್ಮಗಾಂಧಿ ಅವರ ವ್ಯಕ್ತಿತ್ವ ಕುರಿತು ಬರೆದ ಚಿಂತನೆಗಳಿಗೆ ಹೆಚ್ಚು ಮಹತ್ವವಿದೆ. ಯಾವ ಆಯಾಮಗಳ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಎಂಬ ವ್ಯಕ್ತಿತ್ವವು ಭಾರತಕ್ಕೆ ಮಾತ್ರವಲ್ಲ; ವಿಶ್ವಕ್ಕೂ ಮಹತ್ವ ಪಡೆದಿದೆ ಎಂಬುದನ್ನು ರಾಮ ಮನೋಹರ ಲೋಹಿಯಾ ಅವರು ತಮ್ಮದೇ ಆದ ಚಿಂತನೆಗಳಿಂದ ವಿವರಿಸಿದ್ದಾರೆ. ಹೀಗಾಗಿ, ಈ ಕೃತಿಗೆ ರಾಜಕೀಯ ಹಾಗೂ ಸಾಮಾಜಿಕ ಮಹತ್ವ ಬಂದಿದೆ.
©2024 Book Brahma Private Limited.