ಸ್ವಪನ್ ಸೇಠ ಅವರ ಮೂಲ ಕೃತಿಯನ್ನು ಪತ್ರಕರ್ತ-ಅಂಕಣಕಾರ ವಿಶ್ವೇಶ್ವರ ಭಟ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಅಷ್ಟಕ್ಕೂ ನಾ ಹೇಳೋದು ಇಷ್ಟು.!.ಸ್ವಪನ್ ಸೇಠ ಅವರ ಆತ್ಮಕಥನವನ್ನು ನಿರೂಪಿಸುತ್ತದೆ.
ಜಾಹೀರಾತು ವೃತ್ತಿಯಲ್ಲಿದ್ದ ಸ್ವಪನ್ ಸೇಠ,ತಮ್ಮ 17ನೇ ವಯಸ್ಸಿನಲ್ಲಿ ವೀಡಿಯೊ ಟೇಪ್ ಮತ್ತು ಕಂಪ್ಯೂಟರ್ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ. ಕಾಲೇಜು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿದ. ಬೆಂಗಳೂರಿನ ಐಐಎಂನಲ್ಲಿ ಪಾಠ ಮಾಡಲು ಹೇಗೋ ಸಮಯ ಮಾಡಿಕೊಂಡಿದ್ದ. ಟಾಟಾ ಸ್ಟೀಲ್ ಸಂಸ್ಥೆಗಾಗಿ ಘೋಷವಾಕ್ಯ "ವೀ ಆಲ್ಸೋ ಮೇಕ್ ಸ್ಟೀಲ್"(ನಾವು ಉಕ್ಕನ್ನೂ ನಿರ್ಮಾಣ ಮಾಡುತ್ತೇವೆ) ಬರೆದರು. 22ರ ವಯಸ್ಸಿನಲ್ಲಿ ಕಾನ್, ಮಾಂಟ್ರಿಕ್ಸ್ ಚಲನಚಿತ್ರೋತ್ಸವ ಮತ್ತು ಕ್ಲಿಯೋಸ್ ಪ್ರಶಸ್ತಿ ಪಡೆದರು. 24ರ ವಯಸ್ಸಿಗೆ ದೇಶದ ಅತಿ ಚಿಕ್ಕ ವಯಸ್ಸಿನ ಸೃಜನಶೀಲ ನಿರ್ದೇಶಕ ಎಂಬ ಹೆಗ್ಗಳಿಕೆ ಅವರದು. 28ರ ವಯಸ್ಸಿಗೆ ತಮ್ಮದೇ ಆದ ಈಕ಼್ವಸ್ ಸಂಸ್ಥೆ ಸ್ಥಾಪಿಸಿ, ಒಂದು ವರ್ಷದಲ್ಲೇ ವರ್ಷದ ಅತ್ಯುತ್ತಮ ಊದಯೋನ್ಮುಖ ಸಂಸ್ಥೆಯ ಪ್ರಶಸ್ತಿ ಪಡೆದುಕೊಂಡರು. ಆದರೆ, ಈ ಯಶಸ್ಸು ಅವರನ್ನು ಸದಾ ಹಿಡಿಯಲಿಲ್ಲ. ಆತ ಇದನ್ನೇ ಹೇಳಹೊರಟಿರುವುದು ವೈಶಿಷ್ಟ್ಯ. ಫೇಸ್ ಬುಕ್ ಸಮೂದಾಯದ ನಿರ್ವಹಣೆ ಜೊತೆಗೆ ವಿಶ್ವದ ಅಪರೂಪದ ವೈನ್ ಗಳು, ಪೇಪರ್, ಮೇಣದ ಬತ್ತಿ, ಪುಸ್ತಕಗಳು, ವಿಶ್ವ ಸಿನಿಮಾ, ಪೆನ್ಸಿಲ್ ಗಳು, ಸುಗಂಧ ದ್ರವ್ಯಗಳು ಮುಂತಾದ ಅನೇಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರರ ಜೊತೆಗೆ ಅವರು ಗುರ್ ಗಾಂವ್ ನಲ್ಲಿದ್ದಾರೆ. ಇವರ ಜೀವನ ಚರಿತ್ರೆಯನ್ನು ಕಟ್ಟಿಕೊಡುವ ಕೃತಿ ಇದು.
©2024 Book Brahma Private Limited.