ಸಾಫ್ಟ್ ವೇರ್ ನಿಂದ ಸಾಕ್ಷಾತ್ಕಾರದಕಡೆಗೆ ಜಯಪ್ರಕಾಶ ಬಿ.ಎಸ್ ಅವರ ಅನುವಾದಿತ ಕೃತಿಯಾಗಿದೆ. ತುಂಬಾ ಜನರು ಜ್ಞಾನೋದಯವೆಂದರೆ ದಿವಾಳಿಕೋರನಂತೆ ಬದುಕುವುದು ಎಂದುಕೊಂಡಿದ್ದಾರೆ. ಆದರೆ ಅದು ಶುದ್ಧ ತಪ್ಪು. 'ಜ್ಞಾನೋದಯ'ವೆಂದರೆ ನಮ್ಮನ್ನು ನಾವು ಕಷ್ಟಕ್ಕೂ ಉಪವಾಸಕ್ಕೂ ದೂಡಿಕೊಳ್ಳುವುದಲ್ಲ, ಬದಲಿಗೆ, ಜ್ಞಾನೋದಯವೆಂದರೆ ಪ್ರೀತಿ, ಉತ್ಕಟತೆ ಮತ್ತು ಸತ್ಯಸಂಧತೆಯ ಬೆಳಕಿನಲ್ಲಿ ಬದುಕುವುದು ಎಂದರ್ಥ. ಅಂದರೆ, ನಾವು ಯಾವುದೇ ಕಟ್ಟುಪಾಡುಗಳಿಲ್ಲದೆ, ನಿಷೇಧಗಳಿಲ್ಲದೆ ಬದುಕುವುದನ್ನು ಕಲಿಯುವುದು ಎಂದಷ್ಟೆ. ನೀವು ನಿಮ್ಮದೇ ಆದ ಮತ್ತು ನಿಮಗೆ ಬೇಕೆನಿಸಿದ ವಿಮೋಚನೆಯನ್ನು ಪಡೆದುಕೊಳ್ಳಬೇಕು; ನಿಮ್ಮ ಪಾಲಿನ ಬದುಕನ್ನು ಸಂಪೂರ್ಣವಾಗಿ ಅನುಭವಿಸಬೇಕು. ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೆ- ನಿಮ್ಮ ನಿಯಮಗಳನ್ನು ಪುನರ್ ಸೃಷ್ಟಿಸಿಕೊಳ್ಳಿ ನಿಮ್ಮ ವ್ಯಕ್ತಿತ್ವವನ್ನು ಮುನ ವ್ಯಾಖ್ಯಾನಿಸಿಕೊಳ್ಳಿ! ಬದುಕನ್ನು ಸುಮ್ಮನೆ ಹಾಳಾಗಲು ಬಿಡಬೇಡಿ. ನೀವು ಅನಂತ ಸಾಧ್ಯತೆಗಳಿರುವ ಒಂದು ಅದ್ಭುತ ವ್ಯಕ್ತಿ ಎನ್ನುವುದು ನಿಮಗೆ ನೆನಪಿರಲಿ ಎಂಬುದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.