ವಿಜಯ ಮಲ್ಯ ವೃತ್ತಾಂತ

Author : ಬಿ.ಎಸ್. ಜಯಪ್ರಕಾಶ ನಾರಾಯಣ

Pages 214

₹ 176.00




Year of Publication: 2015
Published by: ವಂಶಿ ಪಬ್ಲಿಕೇಷನ್ಸ್
Address: ನಂ. 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮೀಣ)
Phone: 099165 95916

Synopsys

ಖ್ಯಾತ ಲೇಖಕ ಹಾಗೂ ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ ಅವರ ಅನುವಾದಿತ ಕೃತಿ-ಸೊಗಸುಗಾರನ ಏಳು ಬೀಳು ವಿಜಯ ಮಲ್ಯ ವೃತ್ತಾಂತ. ಕೆ. ಗಿರಿಪ್ರಕಾಶ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿ ಇದು. ವಿಜಯ ಮಲ್ಯ ಸೊಗಸುಗಾರ ಎಂಬುದಕ್ಕೆ ಅವರ ಜೀವನದಲ್ಲಿ ಸಾಕಷ್ಟು ವೃತ್ತಾಂತಗಳು ಇರಬಹುದಾದರೂ ಒಬ್ಬ ಉದ್ಯಮಿಯಾಗಿ ಯಶಸ್ವಿಯಾದ ವ್ಯಕ್ತಿತ್ವವೂ ಹೌದು. ಮಲ್ಯ ಕುಟುಂಬವು ಮೊದಲಿನಿಂದಲೂ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ತಮ್ಮ ತಂದೆ ವಿಠಲ ಮಲ್ಯ ಅವರಿಂದ ಬಳುವಳಿಯಾಗಿ ಬಂದಿದ್ದ ಸಂಪತ್ತನ್ನು ಇವರು ಇಮ್ಮಡಿಸಿದರು. ಉದ್ಯಮ ಕ್ಷೇತ್ರದಲ್ಲಿ ವೈವಿಧ್ಯತೆಯನ್ನು ತಂದರು. ಆದರೆ, ನಿರ್ವಹಣೆಯ ಕಾರ್ಯ ಭಾರಕ್ಕೆ ನಲುಗಿ ಹೋದದ್ದೂ ಇದೆ. ಭಾರತ ಸರ್ಕಾರಕ್ಕೆ ಸಾಲಗಾರರಾಗಿಯೂ ಇದ್ದಾರೆ.  ಸಂಪತ್ತಿನ ತುತ್ತ ತುದಿಗೇರಿದ್ದ ಈ ವ್ಯಕ್ತಿ ಭಾರತೀಯರ ಮುಂದೆ ಸಾರ್ವಜನಿಕ ದುಡ್ಡನ್ನು ದುರುಪಯೋಗ ಪಡಿಸಿಕೊಂಡ ಕುಖ್ಯಾತಿಗೂ ಒಳಗಾದರು. ಇಂತಹ ವ್ಯಕ್ತಿತ್ವವನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.  

About the Author

ಬಿ.ಎಸ್. ಜಯಪ್ರಕಾಶ ನಾರಾಯಣ

ಪತ್ರಕರ್ತ ಬಿ.ಎಸ್. ಜಯಪ್ರಕಾಶ್‌ ನಾರಾಯಣ ಅವರು ಉತ್ತಮ ಅನುವಾದಕ ಕೂಡ. ಪ್ರಜಾವಾಣಿ, ವಿಜಯ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕ/ ವರದಿಗಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟಿ.ಜೆ.ಎಸ್‌. ಜಾರ್ಜ್‌ ಅವರ ಎಂ.ಎಸ್., ಯು.ಆರ್‌. ಅನಂತಮೂರ್ತಿ ಅವರ ’ನನ್ನ ಸಾಹಿತ್ಯದ ಐದು ದಶಕಗಳು’, ’ನಾನು ಮಲಾಲ’ ಕೃತಿಗಳನ್ನು ಅನುವಾದಿಸಿದ್ದಾರೆ. ಛಾಯಾಗ್ರಾಹಕ ಕೆ.ಜಿ. ಸೋಮಶೇಖರ ಅವರ ಆತ್ಮಕತೆ ’ನನ್ನ ಬದುಕು ನನ್ನ ಫೋಟೊಗ್ರಫಿ’ ಕೃತಿಯನ್ನು ನಿರೂಪಿಸಿದ್ದಾರೆ. ...

READ MORE

Related Books