ಜ್ಞಾನಪೀಠ, ಪದ್ಮಭೂಷಣ ಗೌರವಗಳಿಗೆ ಭಾಜನರಾದ ಹಿಂಬಯ ಛಾಯಾವಾದಿ ಕಏಚತುಷ್ಟಯರಲ್ಲಿ ಮುಖರಾದ ಮಹಾದೇವಿ ವರ್ಮಾ (1907-987) ತಮ್ಮ ನೀಹಾರ' (1930) ಕಾವ್ಯಕೃತಿಯಿಂದ ಮೊದಲುಗೊಂಡು 6 ದಶಕಗಳಷ್ಟು ಕಾಲ ಗದ್ಯ, ಪದ್ಯ, ಕೃತಿರಚನೆ ಮಾಡಿದವರು. ಅವರು ಹಿಂದಿ ಹಾಗೂ ಸುನ್ನತಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಯಾಗ ಏಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದರು. ಸಾಹಿತ್ಯ ಅಕಾಡೆಮಿಯ ಫೆಲೋ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಗೌರವ ಡಾಕ್ಯೂರೇಟ್ ಗಳಗೆ ಪಾತ್ರರಾಗಿದ್ದರು. ಆಧುನಿಕ ಹಿಂದಿ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯವಾದುದು. ಮಹಾದೇವಿ ವರ್ಮಾ ಅವರ ಕುಲತಾಗಿ ಸಮರ್ಥವಾಗಿ ಈ ಕೃತಿಯನ್ನು ರಚಿಸಿದವರು ಡಾ. ಆಗಲ್ ಗುಪ್ತರವರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಹಿಂಬ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಅವರು ಸಾಹಿತಿ ಹಾಗೂ ವಿಮರ್ಶಕರಾಣ ಪ್ರಸಿದ್ಧಿ ಪಡೆದ್ದರು. ಅನುವಾದಕರಾದ ಡಾ. ಭಾಲಚಂದ್ರ ಜಯಶೆಟ್ಟಿಯವರು ಕವಿ, ಲೇಖಕರಾ ಕೂಡ ಪ್ರಸಿದ್ಧರು. ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿಗಳನ್ನು ಪಡೆದಿರುವ ಇವರು ಕಾಲೇಜ್ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತ ಜೀವನವನ್ನು ಗುಲ್ಬರ್ಗಾದಲ್ಲಿ ಕ್ರಿಯಾಶೀಲರಾಗಿ ನಡೆಸುತ್ತಿದ್ದಾರೆ. ತೀನಂಶ್ರೀಯವರ 'ಭಾರತೀಯ ಕಾವ್ಯಮೀಮಾಂಸೆ", ಜಿ.ಎಸ್. ಶಿವರುದ್ರಪ್ಪನವರ ಅಕಾಡೆಮಿ ಪ್ರಶಸ್ತಿ ಏಜೇತ ಕೃತಿ 'ಕಾವ್ಯಾರ್ಥ ಚಿಂತನ' ಮುಂತಾದ ಹತ್ತಾರು ಕೃತಿಗಳನ್ನು ಕನ್ನಡದಿಂದ ಹಿಂದಿ ಭಾಷೆಗೆ ಹಾಗೂ 'ಮಹಾದೇವಿ ವರ್ಮಾ' ಸಹಿತ ಹಲವಾರು ಕೃತಿಗಳನ್ನು ಹಿಂದಿಯಿಂದ ಕನ್ನಡಕ್ಕೂ ಅನುವಾದಿಸಿದ್ದಾರೆ.
©2024 Book Brahma Private Limited.