ಸಾಹಿತ್ಯ ಮತ್ತು ವಿಜ್ಞಾನ ಎಂದಿಗೂ ಒಟ್ಟೊಟ್ಟಿಗೆ ಸಾಗಬೇಕಿತ್ತು. ಆದರೆ ಇಂದು ಜಾಗತೀಕರಣ ಮತ್ತು ತಂತ್ರಜ್ಞಾನಗಳು ಮಾನವನ ಬದುಕಿನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. ಆದುದರಿಂದ ಪ್ರಸ್ತುತ ಇವೆರಡನ್ನು ಜೊತೆ ಜೊತೆಯಲ್ಲೆ ಅಧ್ಯಯನ ಮಾಡಬೇಕಾದದ್ದು ಅನಿವಾರ್ಯವಾಗಿದೆ. ಇದು ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿದೆ. ವಿಜ್ಞಾನ ಸಾಹಿತ್ಯದ ಕುರಿತಾಗಿ ಆಳವಾಗಿ ಅಧ್ಯಯನ ಮಾಡಿರುವ ಲೇಖಕರು ವಿಜ್ಞಾನ ಮತ್ತು ಸಾಹಿತ್ಯದ ಅಂತರ್ ಶಿಸ್ತೀಯತೆಯ ಕುರಿತು ಇಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಕೆ.ಪುಟ್ಟಸ್ವಾಮಿ, ನಾಗೇಶ ಹೆಗಡೆ, ಳ, ವಸುಂಧರಾ ಭೂಪತಿ ಮೊದಲಾದ ಪ್ರಮುಖರ ಅಭಿಪ್ರಾಯಗಳನ್ನು ಇಲ್ಲಿ ನೀಡಿದ್ಧಾರೆ.
©2024 Book Brahma Private Limited.