ಸ್ವಿಚ್ ಆಫ್ -ಟಿ.ಜಿ. ಶ್ರೀನಿಧಿ ಅವರ ಕೃತಿ. ಮೊಬೈಲ್ ಫೋನಿನ ಅನುಕೂಲತೆಗಳ ಸದುಪಯೋಗ ಪಡೆದುಕೊಳ್ಳುತ್ತಲೇ, ಅದರ ದುಷ್ಪರಿಣಾಮಗಳನ್ನೂ ಹತೋಟಿಯಲ್ಲಿಟ್ಟುಕೊಳ್ಳುವುದು ಇಂದಿನ ಅಗತ್ಯ. ಆದರೆ ಇದನ್ನು ಕಾರ್ಯಗತಗೊಳಿಸುವುದು ಸುಲಭದ ಸಂಗತಿಯಲ್ಲ, ಅದಕ್ಕೊಂದು ನಿರ್ದಿಷ್ಟವಾದ ಸೂತ್ರವೂ ಇಲ್ಲ. ಮೊಬೈಲ್ ಫೋನನ್ನು ಎಲ್ಲಿ, ಹೇಗೆ, ಎಷ್ಟು ಪ್ರಮಾಣದಲ್ಲಿ ಬಳಸುವುದು ಒಳ್ಳೆಯದು ಎನ್ನುವುದನ್ನು ಸ್ವಂತ ಅನುಭವದಿಂದಲೇ ಕಂಡುಕೊಳ್ಳಬೇಕು. ಯಾವುದೇ ಪ್ರಯಾಣವಾದರೂ ಅದು ಎಲ್ಲೋ ಒಂದುಕಡೆ ಪ್ರಾರಂಭವಾಗಬೇಕು. ಹಗ್ಗದ ಮೇಲಿನ ಈ ನಡಿಗೆಯೂ ಅಷ್ಟೇ: ಆಗಾಗ್ಗೆ ಮೊಬೈಲ್ ಫೋನನ್ನು ದೂರದಲ್ಲಿಟ್ಟು, ಅದರಿಂದಾಚೆಗಿನ ಜಗತ್ತಿಗೆ ನಮ್ಮನ್ನು ತೆರೆದುಕೊಳ್ಳುವುದು ಇದನ್ನು ಪ್ರಾರಂಭಿಸುವ ವಿಧಾನಗಳಲ್ಲೊಂದು. ಹಾಗೆ ಮಾಡಲು ನಿಮಗೆ ಕೊಂಚ ಉತ್ತೇಜನ ನೀಡುವುದಷ್ಟೇ ಈ ಪುಸ್ತಕದ ಉದ್ದೇಶ.’ ಎಂದು ಲೇಖಕರು ಹೇಳಿದ್ದಾರೆ.
©2024 Book Brahma Private Limited.