ಭವ್ಯ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಭಾರತದಲ್ಲಿ ತಂತ್ರಜ್ಞಾನವು ಉನ್ನತ ಮಟ್ಟದಲ್ಲಿ ಬೆಳೆದಿರುವುದನ್ನು ಕಾಣಬಹುದು. ಖಗೋಳ, ಗಣಿತ, ವಿಜ್ಞಾನ, ವಿಶೇಷವಾಗಿ ವೈದ್ಯವಿಜ್ಞಾನದಲ್ಲಿ ಪ್ರಾಚೀನ ಭಾರತೀಯರು ಪಡೆದ ನೈಪುಣ್ಯ ಹಿರಿಮೆ, ಗರಿಮೆಗಳು ಲೋಕವಿಖ್ಯಾತವಾಗಿವೆ. ಹಾಗೆಯೇ ಲೋಹ ತಂತ್ರಜ್ಞಾನದಲ್ಲೂ ನಮ್ಮವರ ಸಾಧನೆ ಅತ್ಯುನ್ನತ ಮಟ್ಟದ್ದು. ವಿಶೇಷವಾಗಿ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚುವುದು, ಅದನ್ನು ಸಂಸ್ಕರಿಸುವುದು, ತಾಮ್ರವನ್ನು ಬೇರೆ ಬೇರೆ ಲೋಹಗಳಿಗೆ ಬೆರೆಸಿ ಮಿಶ್ರಲೋಹವನ್ನು ತಯಾರಿಸುವುದು, ತವರ, ಸತುವು- ಈ ಒಂದೊಂದು ಲೋಹವನ್ನು ಕುರಿತು ಪ್ರಾಚೀನರು ಪಡೆದಿದ್ದ ಜ್ಞಾನ ಬೆರಗುಹುಟ್ಟಿಸುತ್ತದೆ.
ಈ ಕೃತಿಯಲ್ಲಿ ಇನ್ನೊಂದು ವಿಶೇಷವಿದೆ. ವೇದ ಸಾಹಿತ್ಯದಲ್ಲಿ ಬರುವ ಕಬ್ಬಿಣಕ್ಕೆ ಸಂಬಂಧಿಸಿದ ಶಬ್ದಗಳ ಸಂಕ್ಷಿಪ್ತ ಕೋಶವನ್ನು ಕೊಟ್ಟಿದೆ. ಹಾಗೆಯೇ ಲೋಹ ತಂತ್ರಜ್ಞಾನ ನಡೆದು ಬಂದ ದಾರಿಯ ಬಗ್ಗೆ ಅತ್ಯಂತ ಉಪಯುಕ್ತ ಮಾಹಿತಿಯೂ ಇದೆ. ಲೋಹ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಪ್ರಚಲಿತವಿದ್ದ ಪ್ರಾಚೀನ ಗ್ರಂಥಗಳ ಉಲ್ಲೇಖವೂ ಈ ಕೃತಿಯಲ್ಲಿ ಲಭ್ಯ.
©2024 Book Brahma Private Limited.