ಲೇಖಕ ಟಿ.ಜಿ.ಶ್ರೀನಿಧಿ ಅವರ ಕೃತಿ-ಕಂಪ್ಯೂಟರ್ ಗೆ ಪಾಠ ಹೇಳಿ. ನಮ್ಮ ಆಜ್ಞೆ ಮೀರಿ ಕಂಪ್ಯೂಟರ್ ಏನೂ ಮಾಡದು. ನಾವು ಆಜ್ಞೆ ನೀಡಿದರೆ ಮಾತ್ರ ಕೆಲಸ ಮಾಡುತ್ತದೆ. ಮಾತ್ರವಲ್ಲ; ಹೇಳಿದಷ್ಟೇ ಮಾಡುತ್ತದೆ; ಹೆಚ್ಚಿಗೆ ಏನೂ ಮಾಡದು. ಆದ್ದರಿಂದ, ನಾವು ಹೇಳಿದಂತೆ ಮಾಡುವುದಕ್ಕೆ ಅದಕ್ಕೆ ಹೇಗೆ ತಯಾರು ಮಾಡಬೇಕು? ಸಾಫ್ಟ್ ವೇರ್ ಎಂದರೇನು? ಅದನ್ನು ಹೇಗೆ ತಯಾರಿಸುವುದು ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್‌ವೇರನ್ನು ಕಂಡುಕೊಂಡರೆ ತಾನೆ? ಹಾಗಾದರೆ ಸಾಫ್ಟ್‌ವೇರನ್ನು ಸಿದ್ಧಪಡಿಸುವುದು ಎಂದರೇನು? ಅದು ಸಾಧ್ಯವಾಗುವುದು ಹೇಗೆ? ಇದರ ಹಿಂದಿರುವ ತರ್ಕವೇನು? ಕ್ರಮಾವಳಿಗಳೇನು? ಇತ್ಯಾದಿ ಕುರಿತು ಪ್ರಾಥಮಿಕ ಮಾಹಿತಿಗಳಿರುವ ಕೃತಿ ಇದು.
©2025 Book Brahma Private Limited.