‘ಆನ್ ಲೈನ್- ಆಫ್ ಲೈನ್ ಕಲಿಕೆ’ ಲೇಖಕ ಬೇದ್ರೆ ಮಂಜುನಾಥ ಅವರ ಕೃತಿ. ಐಸಾಕ್ ಅಸಿಮೋವ್ ಕಾಣ್ಕೆ ನಿಜವಾಗಿದೆ. ಆಲ್ವಿನ್ ಟಾಫ್ಲರ್ ನ ಫ್ಯೂಚರ್ ಷಾಕ್ ತಲ್ಲಣಗೊಳಿಸಿದೆ. ಆನ್ ಲೈನ್ ಶಿಕ್ಷಣ ಕ್ರಾಂತಿ ಕಾಲಿಟ್ಟಿದೆ. ಇ- ಲರ್ನಿಂಗ್ ಜಾಯ್ ಲರ್ನಿಂಗ್ ಸಾಕ್ಷಾತ್ಕಾರಗೊಂಡಿದೆ. ಡಿಜಿಟಲ್ ಮೋಸಗಾರರೂ ಹುಟ್ಟಿಕೊಂಡಿದ್ದಾರೆ. ಗೂಗಲ್, ಯೂಟ್ಯೂಬ್ ಗಳು ಶಿಕ್ಷಣ ಕ್ಷೇತ್ರದಲ್ಲಿ ಊಹಿಸಲಿಕ್ಕೂ ಸಾಧ್ಯವಾಗದ ವಿನೂತನ ಬದಲಾವಣೆಗಳನ್ನು ತಂದಿವೆ. ಡಿಜಿಟಲ್ ಅಸಿಸ್ಟೆಂಟ್ ಗಳು ನಮ್ಮ ದಿನಚರಿಯನ್ನು ನಿಯಂತ್ರಿಸುತ್ತಿವೆ. ಮಲ್ಟಿಮೀಡಿಯಾ ಟೀಚಿಂಗ್ ದೈನಂದಿನ ಆಕರ್ಷಣೆಯಾಗಿದೆ. ಇಷ್ಟ ಬಂದದ್ದನ್ನು ಕಲಿಯಲು ಸಾಧ್ಯಮಾಡುವ ಲಿಬರಲ್ ಆರ್ಟ್ಸ್ ಎಜುಕೇಷನ್ ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಸ್ಥಾನಪಡೆದಿದೆ. ಈ ಎಲ್ಲಾ ವಿಷಯಗಳೊಂದಿಗೆ ನೂರಾರು ವೆಬ್ ಸೈಟ್ ಗಳ ಸಹಿತ ಹೊಸ ಹೊಸ ಕಲಿಕೆಯ ಮಾರ್ಗಗಳ ಅನ್ವೇಷಣೆ ಆರಂಭವಾಗಿದೆ. ಆನ್ ಲೈನ್- ಆಫ್ ಲೈನ್ ಕಲಿಕೆಯ ಪ್ರಯೋಗಗಳ ಫಲಿತಾಂಶಗಳನ್ನು ಈ ಕೃತಿಯಲ್ಲಿ ಹಂಚಿಕೊಳ್ಳಲಾಗಿದೆ.
©2025 Book Brahma Private Limited.