`ತಂತ್ರ ಪ್ರಪಂಚದಲ್ಲಿ ನ್ಯಾನೋ ಮಂತ್ರ’ ಕೃತಿ ನಾಲ್ಕು ವಿಶೇಷ ಲೇಖನಗಳ ಸಂಗ್ರಹ. ಮೊದಲನೆಯದು ನ್ಯಾನೊ ಪ್ರಪಂಚಕ್ಕೆ ಸಂಬಂಧಿಸಿದ್ದು. ಎರಡನೆಯ ಲೇಖನ `ರತ್ನಗಳು’ ಇಡೀ ರತ್ನ ಪ್ರಪಂಚದ ಅನೇಕ ಪರಿಚಿತ ಮತ್ತು ಅಪರಿಚಿತ ಪ್ರಪಂಚಕ್ಕೆ ಒಯ್ಯುತ್ತದೆ. ಸದ್ಯದಲ್ಲಿ ನಾವು ಹವಾಗುಣದ ಅತಿರೇಕವನ್ನು ಕಾಣುತ್ತಿದ್ದೇವೆ. ಮಾನವ ನಿಸರ್ಗಕ್ಕೆ ಮೂಗು ತೂರಿಸಿದ್ದಾನೆ. ಅದರ ಫಲವೇ ಹವಾಗುಣ ವೈಪರೀತ್ಯ-ಇದನ್ನು ಕುರಿತೇ ಬದಲಾಗುತ್ತಿರುವ ಹವಾಗುಣ ವಿಶ್ವ ಪರಂಪರಾ ತಾಣಗಳ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎಂಬುದರ ಒಳನೋಟ ಮೂರನೆಯ ಲೇಖನದಲ್ಲಿದೆ. ಸಾಮಾನ್ಯವಾಗಿ ಗುಹೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚೇನೂ ತಿಳಿದಿರುವುದಿಲ್ಲ. ಅದೇ ಒಂದು ಅದ್ಭುತ ಜಗತ್ತು; ಅದಕ್ಕೇ ಆದ ಒಂದು ವಿಶಿಷ್ಟ ಪರಿಸರವೂ ಇರುತ್ತದೆ. ಇದರ ವಿವರಗಳು ಕೊನೆಯ ಲೇಖನವಾದ `ಮೋಹಕ ಗುಹೆಗಳ ಮಾಯಾಲೋಕದಲ್ಲಿ’ ಅಚ್ಚುಕಟ್ಟಾಗಿ ಮೂಡಿಬಂದಿದೆ.
ಇಡೀ ಕೃತಿಗೆ `ತಂತ್ರ ಪ್ರಪಂಚದಲ್ಲಿ ನ್ಯಾನೊ ಮಂತ್ರ’ ಎಂಬ ಶೀರ್ಷಿಕೆ ನೀಡಿರುವುದು ಉದ್ದೇಶಪೂರ್ವಕವಾದ್ದೇ. ಏಕೆಂದರೆ ನ್ಯಾನೊ ಪ್ರಪಂಚ ಈಗಾಗಲೇ ತಂತ್ರಜ್ಞಾನ ಪ್ರಪಂಚವನ್ನು ಪ್ರವೇಶಿಸಿದೆ. ವೈದ್ಯಲೋಕದಲ್ಲಿ ಇದು ಭಾರಿ ಬದಲಾವಣೆ ತರುವ ಮುನ್ಸೂಚನೆ ಇದೆ.
©2024 Book Brahma Private Limited.