ಅಭಿವೃದ್ಧಿ ಆಳಿಕೆ ಮತ್ತು ಮಾನವೀಯ ಮೌಲ್ಯಗಳು

Author : ಎಂ.ವೈ. ಘೋರ್ಪಡೆ

Pages 1




Year of Publication: 2010
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಎಂ.ವೈ ಘೋರ್ಪಡೆಯವರ  ’ಅಭಿವೃದ್ಧಿ, ಆಳಿಕೆ ಮತ್ತು ಮಾನವೀಯ ಮೌಲ್ಯಗಳು’ ಎಂಬ ಕೃತಿಯನ್ನು ಕನ್ನಡಕ್ಕೆ: ಪಿ.ಎಸ್. ಗೀತಾ ಮತ್ತು ಶಾಂತಾ ನಾಗರಾಜ್

ಈ ಕೃತಿಯ ಮುನ್ನುಡಿ ಹೀಗಿವೆ :

’ಆಕಾಶದಲ್ಲಿ ಹಾರಾಡುವ ಹಕ್ಕಿಯ ಸಂಕ್ಷಂದ ಮತ್ತು ಆರಾಮವಾಗಿ ಕುಳಿತಹಕ್ಕಿಯ ನೆಮ್ಮದಿಯ ಮುಂದೆ ಹೆಚ್ಚಿನದು ಏನಿದೆ? ಯಾರಾದರೂ ತಟಸ್ಥವಾಗಿ ಜಗತ್ತನ್ನು ನೋಡುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಪಾರಿವಾಳದ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ, ಆ ಹಕ್ಕಿಯ ಮನಃಸ್ಥಿತಿಗೆ ಧ್ಯಾನಸ್ಥ ಸ್ಥಿತಿಯಲ್ಲಿರುವ ಮನುಷ್ಯನ ಮನಸ್ಥಿತಿಗೂ ಹೆಚ್ಚಿನ ವ್ಯತ್ಯಾಸ ತೋರುವುದಿಲ್ಲ. ಹೀಗಿದ್ದಾಗ ಚಿಂತೆಗಳು ನಿಶ್ಚಿಂತ ಸ್ಥಿತಿಗೆ ಬಂದು, ಅಸ್ತಿತ್ವದ ಅನನ್ಯತೆಯ ಅನುಭವವಾಗುತ್ತದೆ. ಇದು ನಿಜವಾದ ಸತ್ಯದ ಜೀವಂತ ನಿದರ್ಶನವಾಗಬಹುದು. ಜೀವನದಲ್ಲಿ ಎಲ್ಲಿ ಯಶಸ್ಸುಗಳನ್ನೂ ಅಪಯಶಸ್ಸನ್ನೂ ಅನುಭವಿಸಿರುವ ಮನುಷ್ಯನು, ಬುದ್ದಿಜನ್ಯವಾದ ಸ್ಪರ್ಧಾತ್ಮಕ ಹಾಗೂ ಸಂಕೀರ್ಣವಾದ ಸಮಸ್ಯೆಗಳನ್ನು ಪ್ರಜ್ಞಾಪೂರ್ವಕವಾಗಿ ದೂರವಿರಿಸಿ ಅವುಗಳಿಂದ ನಿವೃತ್ತಿಹೊಂದಿ ಸ್ವಯಿಚ್ಛೆಯಿಂದಲೇ ವಾನಪ್ರಸ್ಥ ಸ್ಥಿತಿಯನ್ನು ಸ್ವೀಕರಿಸಿದಾಗ, ಅವನು ಪರಮೋಚ್ಚ ಸಂತೃಪ್ತಿಯನ್ನಲ್ಲದೇ ಬೇರೇನನ್ನೂ ಬಯಸುವುದಿಲ್ಲ. ಅಂಥಾ ಮನುಷ್ಯನು ಹೇಗೆ ಮರಗಳು ಹಕ್ಕಿಗಳೂ ತಂಪಾದ ಗಾಳಿಯ ಸುಖವನ್ನು ಅನುಭವಿಸುತ್ತದೋ ಹಾಗೆ ಎಲ್ಲ ಒತ್ತಡಗಳನ್ನು ಕಳಚಿದಂಥಾ ಅಥವಾ ಮಾಯಾಮಾಡಿದಂಥಾ ನಿರಾಳ ಮನಸ್ತನಾಗಿ ಶುದ್ಧಗಾಳಿಯನ್ನು ಆಸ್ವಾದಿಸುತ್ತಾನೆ. ಇದೇ ಬದುಕಿನ ಉದ್ದೇಶವೆಂದು ಕರೆಯುವ ಅಗತ್ಯವೇ ಇಲ್ಲ. ಅಥವಾ ಅದೂ ತಪ್ಪಾಗುತ್ತದೆ. ಏಕೆಂದರೆ ಇಂಥದ್ದು ಯಾವಾಗ ಘಟಿಸಬೇಕೆಂದಿರುತ್ತದೋ ಆಗ ಘಟಿಸುತ್ತದೆ. ಮನುಷ್ಯನಿಗೆ ಆತ ಸಾಯುವ ಮುನ್ನ, ತನ್ನ ಇಡೀ ಜೀವಮಾನದಲ್ಲಿ ಒಮ್ಮೆಯಾದರೂ ಇಂಥಾ ಪರಮೋಚ್ಚ ಅನುಭವವಾದರೆ ಆತನಿಗೆ ಆತ್ಯಂತಿಕ ಸುಖ ಮತ್ತು ಅತ್ಯಾನಂದದ ಅನುಭವವಾಗುತ್ತವೆ.’

About the Author

ಎಂ.ವೈ. ಘೋರ್ಪಡೆ
(07 December 1931 - 29 October 2011)

ಲೇಖಕ, ರಾಜಕಾರಣಿ ಎಂ. ವೈ. ಘೋರ್ಪಡೆ ಅವರು 1931 ಡಿಸೆಂಬರ್ 7 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಯಶವಂತರಾವ್, ತಾಯಿ ಸುಶೀಲಾದೇವಿ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. 1959ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ ಇವರು ಒಟ್ಟು 7 ಬಾರಿ (1959, 1962, 1967, 1972, 1989, 1994, 1999) ಶಾಸಕರಾಗಿದ್ದರು. 1986ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು.  ಪರಿಸರ ಪ್ರೇಮಿಯಾಗಿದ್ದ ಘೋರ್ಪಡೆ ವನ್ಯಜೀವಿ ಛಾಯಾಗ್ರಾಹಕರಾಗಿ ಅಂತಾರಾಷ್ಟ್ರೀಯ ಪುರಸ್ಕಾರಗಳಿಗೂ ಭಾಜನರಾಗಿದ್ದರು. ವನ್ಯಜೀವಿ ಛಾಯಾಚಿತ್ರಗಳ ಸಂಕಲನ `ಸನ್‌ಲೈಟ್ ಅಂಡ್ ಶ್ಯಾಡೋಸ್’, ...

READ MORE

Related Books