ಈ ಕೃತಿಯಲ್ಲಿ ವೇದಕಾಲದಿಂದ ಹಿಡಿದು ಬ್ರಿಟಿಷರ ಆಗಮನದವರೆಗೆ ನಮ್ಮ ದೇಶದಲ್ಲಿ ನಡೆದಿದ್ದ ಶಾಸ್ತ್ರ ಚಿಂತನವನ್ನು ಸೆರೆಹಿಡಿಯಲಾಗಿದ್ದು, ತಿಳುವಳಿಕೆ ವಿಕಾಸಗೊಳ್ಳುವ ಕ್ರಮವನ್ನು ಈ ಗ್ರಂಥದಲ್ಲಿ ಗುರುತಿಸಲಾಗಿದ್ದು, ವೈಜ್ಞಾನಿಕ ಚಿಂತನ ವ್ಯವಸ್ಥಿತವಾಗಿ ನಡೆಯದಿರುವುದಕ್ಕೆ ಹಾಗೂ ತಂತ್ರಜ್ಞಾನದೊಡನೆ ಸಂಬಂಧವನ್ನು ಬೆಳೆಸಲಾಗದ್ದಕ್ಕೆ ಕಾರಣಗಳನ್ನೂ ಈ ಗ್ರಂಥದಲ್ಲಿ ವಿಶ್ಲೇಷಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ವಿಜ್ಞಾನದ ವೈಶಾಲ್ಯ; ವೈಜ್ಞಾನಿಕ ಪದ್ಧತಿ; ಅನೇಕಾಂತವಾದ , ತಂತ್ರಜ್ಞಾನದ ಪ್ರಾಚೀನತೆ; ಹರಪ್ಪ ನಾಗರಿಕತೆಯಲ್ಲಿ ಖಗೋಳಶಾಸ್ತ್ರ ಮತ್ತು ಮಾಪನ ಸಾಧನಗಳು; ಶುಲ್ವಸೂತ್ರಗಳು ,ಮಾಂತ್ರಿಕತೆಯಿಂದ ಮತದತ್ತ; ಋಗೈದದಲ್ಲಿ ಔಷಧಿಗಳು; ಅಣವರ ಹಾವು ಪ್ರಾಚೀನ ಪ್ರಕೃತಿ ವಿಜ್ಞಾನ; ಚರಕ ಸುಶ್ರುತ ,ವಿಜ್ಞಾನದ ಮೇಲೆ ಧರ್ಮಶಾಸ್ತ್ರಕಾರರ ಹಲ್ಲೆ; ತ್ರಿಮಲ್ಲಭಟ್ಟ; ವೈದ್ಯಸಾರಸಂಗ್ರಹ ಮತ್ತು ಸಕಲವೈದ್ಯಸಂಹಿತಾಸಾರಾರ್ಣವ ,ರಸಾಯನ ತಂತ್ರ; ರಸಪದ್ಧತಿ ಲೋಹಸರ್ವಸ್ವ ,ಅರ್ಥಶಾಸ್ತ್ರ, ಖಗೋಳಶಾಸ್ತ್ರ ಗಣಿತಶಾಸ್ತ್ರ; ಮಹಾವೀರಾ ಚಾರ್ಯ ವ್ಯವಹಾರ ಗಣಿತಂ; ಅಲ್ ಬಿರೂನಿಯ ವಿಮರ್ಶೆ; ಜಂಬೂದ್ವೀಪ ,ಪ್ರಾಣಿಶಾಸ್ತ್ರ; ಹಾಯುರ್ವೆದ-ಅಶ್ವಾಯುರ್ವದ; ಸಸ್ಯಜೀವಿಗಳು; ವೃಕ್ಷಾಯುರ್ವೆದ; ಸೂಪಶಾಸ್ತ್ರ; ಲೋಕೋಪಕಾರಂ; ಸಮರಾಂಗಣ ಸೂತ್ರಧಾರ ,ಮಾನಸೋಲ್ಲಾಸ; ಕಲ್ಯಾಣಕಾರಕ; ಸಮಯ ಪರೀಕ್ಷೆ: ಖಗೇಂದ್ರಮಣಿ ದರ್ಪಣ ಸೇರಿದಂತೆ ಹಲವು ಮಹತ್ವದ ವಿಚಾರಗಳ ವಿಶ್ಲೇಷಣೆಗಳಿವೆ.
©2024 Book Brahma Private Limited.