‘ವಿಜ್ಞಾನ ವೈಶಿಷ್ಟ್ಯ’ ಎಲ್.ಪಿ.ಕುಲಕರ್ಣಿ ಅವರ ಲೇಖನಗಳ ಬರಹವಾಗಿದೆ. ಹೂವಿನ ಮಕರಂದ ಹೀರಲು ಸಜ್ಜಾಗಿರುವ ಡ್ರೋನ್‌ಗಳು, ಭಾರತದಲ್ಲಿ ಅಳಿವನಂಚಿಗೆ ಸೇರಿದ ಪ್ರಮುಖ ಪ್ರಾಣಿಗಳು, ಸಾಗರದಲ್ಲಿ ಹೆಚ್ಚಾಗುತ್ತಿರುವ ಗಾರ್ಬೇಜ್ ಪ್ಯಾಚ್, ನೋಬೆಲ್ ಪ್ರಶಸ್ತಿ ವಿಲ್ಜೆಕ್ ಅವರ ಸಂಶೋಧಾನತ್ಮಕ ವೈಚಾರಿಕ ದೃಷ್ಟಿಕೋನದ ಸಾರ, ಮ್ಯಾಗ್ರೋವ್‌ಗಳ ಮೇಲೆ ಹೇರುತ್ತಿರುವ ಜಾಗತಿಕ ತಾಪಮಾನದ ಪರಿಣಾಮ, ಶಬ್ದತರಂಗದಿಂದ ಮೂಳೆ ಅಂಗಾಂಶವನ್ನು ಬೆಳೆಸಲು ಹೊರಟಿರುವ ವಿಜ್ಞಾನಿಗಳ ಸಾಧನೆಯ ಹಾದಿ, ನಾರ್ಕೋಲಿಪ್ಸಿ ಕುರಿತು ನಡೆದ ಅಧ್ಯಯನಕ್ಕಾಗಿ ನೀಡುವ ಬ್ರೆಕ್ ಥ್ರೂ ಪ್ರಶಸ್ತಿ, 22 ವರ್ಷದ ವಿಜ್ಞಾನಿಯೊಬ್ಬ ಕಂಡುಹಿಡಿದ ಅಂತರ ತಾರಾ ವಸ್ತು ಸೇರಿದಂತೆ ಹಲವಾರು ವಿದ್ವತ್‌ಪೂರ್ಣ, ವೈಜ್ಞಾನಿಕ ಲೇಖನಗಳನ್ನು ಬರೆದಿರುವ ಕುಲಕರ್ಣಿಯವರ ಬರಹ ಓದುಗನಿಗೆ ವಿಜ್ಞಾನದ ಆಪ್ತತೆ ಒದಗಿಸುವಲ್ಲಿ ಯಶಸ್ವಿಯಾಗಿದೆ.
©2024 Book Brahma Private Limited.