ಟಿ.ಜಿ. ಶ್ರೀನಿಧಿ ಅವರು ಬರದೆದ ಕೃತಿ-ಕಂಪ್ಯೂಟರ್ ಪ್ರಪಂಚ. ಕನ್ನಡದ ಲ್ಲಿ ಕಂಪ್ಯೂಟರ್ ಭಾಷೆಯನ್ನು ಬರೆಯಬೇಕು. ಅದು ಸಂಪೂರ್ಣವಾಗಿ ಕನ್ನಡದ ಸೊಗಸನ್ನು ಹೊಂದಿರಬೇಕು ಇಂತಹ ಪ್ರಶ್ನೆಗಳೊಂದಿಗೆ ಹರಸಾಹಸ ಮಾಡಿ ಕನ್ನಡದಲ್ಲಿ ಗಣಕಯಂತ್ರದ ಕೃತಿ ಬರೆದ ಲೇಖಕ ಟಿ.ಜಿ. ಶ್ರೀಧರ, ಕನ್ನಡ ಸಾಹಿತ್ಯ ವಲಯಕ್ಕೆ ಉತ್ತಮ ಕೃತಿ ಸೇರಿಸಿದ್ದಾರೆ. ಇಂಗ್ಲಿಷ್ ಮಯವಾದ ಕಂಪ್ಯೂಟರ್ ಭಾಷೆಯನ್ನು ಕನ್ನಡೀಕರಿಸಿದ್ದಾರೆ. ಕಂಪ್ಯೂಟರ್ ಕಲಿಯಲು ಕನ್ನಡ ತಿಳಿದರೂ ಸಾಕು ಎಂಬಷ್ಟು ಸರಳವಾಗಿ ಈ ಕೃತಿಯನ್ನು ರಚಿಸಿದ್ದಾರೆ.
ಕಂಪ್ಯೂಟರ್ ಚರಿತ್ರೆಯಿಂದ ತೊಡಗಿ ಕ್ಯೂಆರ್ ಕೋಡ್‌ವರೆಗೆ ವಿಸ್ತರಿಸಿರುವ `ಕಂಪ್ಯೂಟರ್ ಪ್ರಪಂಚ` ಕಲಿಯಲು ಪ್ರೇರೇಪಿಸುವ ಹೊಸ ಮಾರ್ಗವೊಂದನ್ನು ಅನಾವರಣಗೊಳಿಸಿದೆ. ಬ್ಲಾಗ್ ತೆರೆಯಬೇಕೆ? ಇಮೇಲ್ ಮಾಡಬೇಕೆ? ಇಂಟರ್‌ನೆಟ್ ಬಗ್ಗೆ ಇಣುಕು ನೋಟಬೇಕೆ? ಕುರ್ಚಿಯಲ್ಲಿ ಅಲ್ಲಾಡದೆ ಕುಳಿತು ಕಂಪ್ಯೂಟರ್ ಪ್ರಪಂಚದಲ್ಲಿ ವಿಹರಿಸಲು ನೆರವಾಗುವ ಆತ್ಮೀಯ ಧಾಟಿಯಲ್ಲಿ ನಿಮಗೆ ಸೂಚನೆಗಳನ್ನು ನೀಡುತ್ತಾ ಹೋಗುತ್ತದೆ.
©2024 Book Brahma Private Limited.